masthmagaa.com:

ಬಿಹಾರದ ನೂತನ ಶಾಸಕರಿಗೆ ಸೋಮವಾರ ಪ್ರಮಾಣ ವಚನ ಬೋಧಿಸುವ ವೇಳೆ ಉರ್ದು ಶಪಥದಲ್ಲಿದ್ದ ‘ಹಿಂದೂಸ್ತಾನ್’ ‌ಎಂಬ ಪದದ ಬಗ್ಗೆ ವಿವಾದ ಮಾಡಲಾಗಿದೆ. ಹಿಂದೂಸ್ತಾನ್​ ಪದ ಬದಲಿಸಿ ‘ಭಾರತ್‌’ ಎಂದು ಮಾಡುವಂತೆ ಅಸಾದುದ್ದಿನ್​ ಓವೈಸಿ ಅವರ ಎಐಎಂಐಎಂ ಪಕ್ಷದ ಶಾಸಕ ಅಖ್ತರುಲ್ ಇಮಾನ್ ಒತ್ತಾಯಿಸಿದ್ರು. ಈ ಬೇಡಿಕೆ ಕಂಡು ಆಶ್ಚರ್ಯಗೊಂಡ ಹಂಗಾಮಿ ಸ್ಪೀಕರ್‌ ಜಿತನ್‌ ರಾಮ್‌ ಮಾಂಜಿ, ‘ಈವರೆಗೆ ಉರ್ದುನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಹಿಂದೂಸ್ತಾನ್​ ಎಂದೇ ಹೇಳಿದ್ದಾರೆ’ ಅಂದ್ರು. ಆದರೂ ಅಖ್ತರುಲ್‌ ಹಠ ಹಿಡಿದ ಕಾರಣ ‘ಹಿಂದೂಸ್ತಾನ್​’ ಬದಲಿಗೆ ‘ಭಾರತ್‌’ ಎಂದು ಹೇಳಲು ಸ್ಪೀಕರ್‌ ಪರ್ಮಿಶನ್ ಕೊಟ್ರು. ಈ ಅಖ್ತರುಲ್ ಬಿಹಾರದಲ್ಲಿ ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಕೂಡ ಹೌದು. ಯಾಕ್ರೀ ಸ್ವಾಮಿ ನಿಮಗೆ ಹಿಂದೂಸ್ತಾನ್​ ಅಂದ್ರೆ ಏನ್ ಕಷ್ಟ ಅಂತ ಕೇಳಿದ್ರೆ, ‘ನಾವು ಯಾವುದೇ ಭಾಷೆಯಲ್ಲಿ ಸಂವಿಧಾನದ ಮುನ್ನುಡಿ ಓದಿದರೂ, ಅಲ್ಲಿ ಭಾರತ್ ಎಂಬ ಪದವನ್ನು ಉಲ್ಲೇಖಿಸಲಾಗಿರುತ್ತದೆ. ಇದನ್ನೇ ನಾನು ಸರಳವಾಗಿ ಹೇಳಿದ್ದೇನೆ’ ಅಂತ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ ಶಾಸಕ ನೀರಜ್‌ ಸಿಂಗ್‌ ಬಬ್ಲು, ‘ಹಿಂದೂಸ್ತಾನ್ ಎಂಬ ಪದದಲ್ಲಿ ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply