30 ವರ್ಷ ದೇಶಸೇವೆ ಸಲ್ಲಿಸಿದ ಐಎನ್​​ಎಸ್​ ವಿರಾಟ್ ಗುಜುರಿಗೆ..!

masthmagaa.com:

ಅಹ್ಮದಾಬಾದ್: ಸತತ 30 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಐಎನ್​ಎಸ್​ ವಿರಾಟ್​​ 3 ವರ್ಷಗಳ ಹಿಂದೆ ನಿವೃತ್ತಿಯಾಗಿತ್ತು.. ಇದೀಗ ಅದನ್ನು ಮುಂಬೈನಿಂದ ಗುಜರಾತ್​​ನ ಭವನಗರಕ್ಕೆ ತಂದು ಗುಜುರಿ ರೀತಿಯಲ್ಲಿ ಮಾರಲಾಗುತ್ತೆ ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೊಂದು ದೀರ್ಘಕಾಲದವರೆಗೆ ಸೇವೆ ಸಲ್ಲಿಸಿರುವ ಯುದ್ಧನೌಕೆಯಾಗಿದ್ದು, 1,987ರಲ್ಲಿ ನೌಕಾಪಡೆಯನ್ನು ಸೇರಿತ್ತು. ಕಳೆದ ತಿಂಗಳು ಮೆಟಲ್ ಸ್ಕ್ರಾಪ್​​ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಈ ನೌಕೆಯ ಹರಾಜು ನಡೆಸಿತ್ತು. ಶ್ರೀರಾಮ್ ಗ್ರೂಪ್ ಈ ನೌಕೆಯನ್ನು 38.54 ಕೋಟಿ ರೂಪಾಯಿಗೆ ಖರೀದಿಸಿತ್ತು. ಸದ್ಯ ಈ ನೌಕೆ ಮುಂಬೈನ ನೌಕಾನೆಲೆಯಲ್ಲಿದ್ದು, ಮುಂದಿನ ತಿಂಗಳು ಗುಜರಾತ್​​​​​​​​​​​​​ನ ಅಲಾಂಗ್ ಎಂಬ ಜಾಗಕ್ಕೆ ತಂದು ಗುಜುರಿಗೆ ಹಾಕಲಾಗುತ್ತೆ.

ಈ ನೌಕೆಯನ್ನು ಮ್ಯೂಸಿಯಂನಲ್ಲಿಡಬೇಕೆಂಬ ಬೇಡಿಕೆಗಳು ಕೇಳಿ ಬಂದಿದ್ದವು. ಆದ್ರೆ ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಸರ್ಕಾರ ಐಎನ್​ಎಸ್ ವಿಕ್ರಾಂತ್​​ನ್ನು ಗುಜುರಿಗೆ ಹಾಕಲಾಗುತ್ತೆ ಅಂತ ಸಂಸತ್​​ನಲ್ಲಿ ಮಾಹಿತಿ ನೀಡಿತ್ತು.

masthmagaa.com

Contact Us for Advertisement

Leave a Reply