ಆರ್​ಎಸ್​ಎಸ್​ ಬ್ಯಾನ್ ಮಾಡಿ: ಸಿಖ್ ಸಮುದಾಯದ ಆಗ್ರಹ..! ಕಾರಣವೇನು..?

ಚಂಡೀಗಢ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ. ಹೀಗಾಗಿ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಸಿಖ್ ಸಂಘ ಅಕಲ್ ತಕ್ತ್​​ ಆಗ್ರಹಿಸಿದೆ. ಚಂಡೀಗಢದಲ್ಲಿ ಮಾತನಾಡಿದ ಅಕಲ್ ತಕ್ತ್​ ಮುಖ್ಯಸ್ಥ ಗಿಯಾನಿ ಹರ್​​ಪ್ರೀತ್ ಸಿಂಗ್​​, ಕೇಂದ್ರದಲ್ಲಿ ಆರ್​ಎಸ್​ಎಸ್​ ವಿಚಾರಧಾರೆಯನ್ನೇ ಅಳವಡಿಸಿಕೊಂಡಿರುವ ಬಿಜೆಪಿ ಅಧಿಕಾರದಲ್ಲಿದೆ. ಆರ್​ಎಸ್​ಎಸ್​ ದೇಶವನ್ನು ವಿಭಜಿಸಿ ಆಳಲು ಯತ್ನಿಸುತ್ತಿದೆ. ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ದೇಶಕ್ಕೆ ಮಾರಕವಾಗಿದ್ದು, ನಾಶಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. ವಿಜಯದಶಮಿಯಂದು ಮಾತನಾಡಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​​, ಭಾರತ ಹಿಂದೂಗಳ ದೇಶ ಎಂದು ಹೇಳಿದ್ದರು.

ಸಿಖ್ ಸಮುದಾಯ ಮತ್ತು ಆರ್​ಎಸ್​ಎಸ್​​ ನಡುವೆ ವಾಕ್ಸಮರ ನಡೆದಿರೋದು ಇದೇ ಮೊದಲಲ್ಲ. ಕಳೆದ ವಾರ ಶಿರೋಮಣಿ ಗುರುದ್ವಾರ ಪ್ರಬಂದಕ್ ಕಮಿಟಿ ಅಧ್ಯಕ್ಷ ಗೋವಿಂದ್ ಸಿಂಗ್ ಲೊಂಗೊವಲ್ ಕೂಡ ಮೋಹನ್ ಭಾಗವತ್ ಅವರ ಹಿಂದೂ ರಾಷ್ಟ್ರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು.

Contact Us for Advertisement

Leave a Reply