masthmagaa.com:

ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆ ಡಿಸೆಂಬರ್ 9ರಿಂದ 14ರವರೆಗೆ ಯುನೈಟೆಡ್​ ಅರಬ್ ಎಮಿರೇಟ್ಸ್​ (UAE) ಮತ್ತು ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಭಾರತದ ಸೇನಾ ಮುಖ್ಯಸ್ಥರೊಬ್ಬರು ಈ ದೇಶಗಳಿಗೆ ಭೇಟಿ ನೀಡುತ್ತಿರೋದು ಇದೇ ಮೊದಲು. ಭೇಟಿ ವೇಳೆ ಎರಡೂ ದೇಶಗಳ ಸೇನಾ ಮುಖ್ಯಸ್ಥರನ್ನ ಭೇಟಿಯಾಗಲಿರುವ ನರಾವಣೆ ರಕ್ಷಣಾ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ. ರಾಜತಾಂತ್ರಿಕ ಉದ್ದೇಶದಿಂದ ಭೂಸೇನಾ ಮುಖ್ಯಸ್ಥರು ಈ ವರ್ಷದಲ್ಲಿ ಫಾರಿನ್ ಟೂರ್ ಹೋಗ್ತಿರೋದು ಇದು ಮೂರನೇ ಸಲ. ಅಕ್ಟೋಬರ್​ನಲ್ಲಿ ಮ್ಯಾನ್ಮಾರ್​ ಮತ್ತು ನವೆಂಬರ್​ನಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದರು ನರಾವಣೆ. ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣ ಮುಂದುವರಿದಿರುವ ನಡುವೆಯೇ ಸೇನಾ ಮುಖ್ಯಸ್ಥರು ವಿವಿಧ ದೇಶಗಳ ಜೊತೆಗೆ ರಕ್ಷಣಾ ಸಂಬಂಧವನ್ನ ಗಟ್ಟಿಗೊಳಿಸಲು ಮುಂದಾಗಿರೋದು ಗಮನಾರ್ಹ. ಡಿಸೆಂಬರ್ 9-10 ರಂದು ಸೇನಾ ಮುಖ್ಯಸ್ಥರು ಯುಎಇನಲ್ಲಿ ಇರಲಿದ್ದಾರೆ. ಡಿಸೆಂಬರ್ 11-12 ಶುಕ್ರವಾರ-ಶನಿವಾರ ಆಗಿರೋದ್ರಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಅಂದು ರಜಾ ದಿನ. ಹೀಗಾಗಿ ಡಿಸೆಂಬರ್ 13-14ರಂದು ಸೌದಿ ಅರೇಬಿಯಾದಲ್ಲಿ ಇರಲಿದ್ದಾರೆ.

-masthmagaa.com

Contact Us for Advertisement

Leave a Reply