ಲಡಾಖ್‌ನ ಕುನ್‌ ಪರ್ವತ ಹಿಮಪಾತದಲ್ಲಿ ಓರ್ವ ಯೋಧನ ಬಲಿ, ಮೂವರು ಕಾಣೆ!

masthmagaa.com:

ಭಾರತ ಸೇನಾ ಪರ್ವತಾರೋಹಿಗಳ ಗುಂಪೊಂದು ಲಡಾಖ್‌ನ ಕುನ್‌ ಪರ್ವತದ ಹಿಮಪಾತದಲ್ಲಿ ಸಿಲುಕಿಕೊಂಡಿದೆ. ಈ ಘಟನೆಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು, ಮೂವರು ಕಾಣೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನಾ ಅಧಿಕಾರಿಗಳ ಪ್ರಕಾರ, ಹೈ ಆಲ್ಟಿಟ್ಯುಡ್‌ ವಾರ್‌ಫೇರ್‌ ಸ್ಕೂಲ್‌ ಮತ್ತು ಎಡ್ವೆಂಚರ್‌ ವಿಂಗ್‌ ಆಫ್‌ ಇಂಡಿಯನ್‌ ಆರ್ಮಿಯ 40 ಸೇನಾ ಸಿಬ್ಬಂದಿಗಳ ಗುಂಪೊಂದು ಕುನ್‌ ಪರ್ವತದಲ್ಲಿ ಎಂದಿನಂತೆ ತಮ್ಮ ಟ್ರೈನಿಂಗ್‌ ಚಟುವಟಿಕೆಗಳಲ್ಲಿ ತೊಡಗಿತ್ತು. ಈ ವೇಳೆ ಅನಿರೀಕ್ಷಿತ ಹಿಮಪಾತದಿಂದಾಗಿ ನಾಲ್ಕು ಸೇನಾ ಸಿಬ್ಬಂದಿಗಳು ಪರ್ವತದಲ್ಲೇ ಸಿಲುಕಿಕೊಂಡರು. ಸಧ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಾಣೆಯಾಗಿರುವ ಯೋಧರ ಶೋಧ ಮುಂದುವರೆದಿದೆ.

-masthmagaa.com

Contact Us for Advertisement

Leave a Reply