masthmagaa.com:

ಆಸ್ಟ್ರಾಝೆನೆಕಾ ಮತ್ತು ಆಕ್ಸ್​ಫರ್ಡ್ ಯುನಿವರ್ಸಿಟಿ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಲಸಿಕೆ ವೃದ್ಧರಲ್ಲೂ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಅನ್ನೋದು ಗೊತ್ತಾಗಿದೆ. ಸಾಮಾನ್ಯವಾಗಿ ವಯಸ್ಸಾದವರಿಗೆ ಕೊರೋನಾ ತಗುಲುವ ಸಾಧ್ಯತೆ ಹೆಚ್ಚಿರುತ್ತೆ. ಸಾವಿನ ಅಪಾಯ ಕೂಡ ವಯಸ್ಸಾದವರಲ್ಲಿ ಹೆಚ್ಚಿರುತ್ತೆ. ಆದ್ರೆ ಆಕ್ಸ್​ಫರ್ಡ್ ಲಸಿಕೆಯು 70 ವರ್ಷ ಮೇಲ್ಪಟ್ಟವರಲ್ಲೂ ಬಲವಾದ ಪ್ರತಿಕಾಯ ವ್ಯವಸ್ಥೆ ಮತ್ತು ಟಿ-ಸೆಲ್​ಗಳನ್ನ ರೂಪಿಸುತ್ತೆ ಎಂಬ ವಿಚಾರ ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟವಾಗಿದೆ. ಸೋ ಕೊರೋನಾಗೆ ಹೆಚ್ಚು ಅಪಾಯದಲ್ಲಿರುವ ವಯಸ್ಸಾದವರಿಗೂ ಆಕ್ಸ್​ಫರ್ಡ್ ಲಸಿಕೆ ರಕ್ಷಣೆ ನೀಡಲಿದೆ ಅನ್ನೋ ಭರವಸೆ ಮೂಡಿದೆ ಆಕ್ಸ್​ಫರ್ಡ್ ವ್ಯಾಕ್ಸಿನ್ ಗ್ರೂಪ್​ನ ಮಹೇಶಿ ರಾಮಸ್ವಾಮಿ ಹೇಳಿದ್ದಾರೆ. ಕ್ರಿಸ್​ಮಸ್ ವೇಳೆಗೆ ಈ ಲಸಿಕೆಯ ಅಂತಿಮ ಫಲಿತಾಂಶ ಪ್ರಕಟ ಮಾಡುವ ಉದ್ದೇಶವನ್ನ ಸಂಶೋಧಕರು ಹೊಂದಿದ್ದಾರೆ.

ಮತ್ತೊಂದುಕಡೆ ಕೊರೋನಾ ಲಸಿಕೆ ಬಿಡುಗಡೆಯ ದಿನಗಳು ಹತ್ತಿರ ಬರುತ್ತಿದ್ದಂತೇ ಅದನ್ನ ಸಂಗ್ರಹಿಸಿಡುವ ವ್ಯವಸ್ಥೆ ಕೂಡ ಎಲ್ಲಾ ದೇಶಗಳಲ್ಲಿ ಮಾಡಿಕೊಳ್ಳಲಾಗ್ತಿದೆ. ನಮ್ಮ ಕರ್ನಾಟಕದ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 55 ಲಕ್ಷ ಕೊರೋನಾ ಲಸಿಕೆಯನ್ನ ಸಂಗ್ರಹಿಸಿಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಲಸಿಕೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಪೂರೈಕೆಯಾಗಲಿದೆ.

-masthmagaa.com

Contact Us for Advertisement

Leave a Reply