masthmagaa.com:

ಟೀಂ ಇಂಡಿಯಾದ ಅಧಿಕೃತ ಕಿಟ್​ ಪ್ರಾಯೋಜಕತ್ವವನ್ನು ಬೆಂಗಳೂರು ಮೂಲದ ಮೊಬೈಲ್ ಪ್ರೀಮಿಯರ್ ಲೀಗ್ (MPL) ಪಡೆದುಕೊಂಡಿದೆ. ಇದು ಮೂರು ವರ್ಷದ ಒಪ್ಪಂದವಾಗಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾದ ಪುರುಷ ಆಟಗಾರರು, ಮಹಿಳಾ ಆಟಗಾರರು ಮತ್ತು ಅಂಡರ್-19 ತಂಡದ ಆಟಗಾರರು ಎಂಪಿಎಲ್​ ಡಿಸೈನ್ ಮಾಡಿ ತಯಾರಿಸಿದ ಜೆರ್ಸಿಯನ್ನೇ ಧರಿಸಲಿದ್ದಾರೆ. ಬಿಸಿಸಿಐ ಮತ್ತು ಎಂಪಿಎಲ್​ ನಡುವಿನ ಈ ಒಪ್ಪಂದ ಮುಂಬರುವ ಆಸ್ಟ್ರೇಲಿಯಾ ಸರಣಿಯಿಂದ ಆರಂಭವಾಗಲಿದೆ. ಈ ಹಿಂದೆ ನೈಕಿ ಕಂಪನಿಯು ಟೀಂ ಇಂಡಿಯಾದ ಕಿಟ್ ಪ್ರಾಯೋಜಕತ್ವ ಹೊಂದಿತ್ತು. ಬಿಸಿಸಿಐ ಮತ್ತು ನೈಕಿ ನಡುವಿನ ಒಪ್ಪಂದ ಇತ್ತೀಚೆಗೆ ಕೊನೆಗೊಂಡಿತ್ತು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಅಧಿಕೃತ ಕಿಟ್​ ಪ್ರಾಯೋಜಕತ್ವ ಇಲ್ಲದೆ ಪಿಪಿಇ ಕಿಟ್​ ಧರಿಸಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಇದೀಗ ಟೀಂ ಇಂಡಿಯಾಗೆ ಅಧಿಕೃತ ಕಿಟ್ ಪ್ರಾಯೋಜಕತ್ವ ಸಿಕ್ಕಿದೆ.

-masthmagaa.com

Contact Us for Advertisement

Leave a Reply