masthmagaa.com:

ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಜೊತೆಗೆ ವಿಪಕ್ಷಗಳು ಬಂದ್​ಗೆ ಬೆಂಬಲ ನೀಡಿರೋದ್ರಿಂದ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಂದ್​ ಬಹುತೇಕ ಯಶಸ್ವಿಯಾಗುವ ಲಕ್ಷಣ ಕಾಣ್ತಿದೆ. ಆದ್ರೆ ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಬಂದ್ ಯಶಸ್ವಿಯಾಗುತ್ತಾ ಅಥವಾ ಮೊನ್ನೆಯಂತೆ ಠುಸ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು. ನಾಳಿನ ಭಾರತ್​ ಬಂದ್​ಗೆ ಲಾರಿ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ,  ಓಲಾ ಮತ್ತು ಊಬರ್ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಇವುಗಳು ನಾಳೆ ಸಿಗೋದು ಅನುಮಾನ ಎನ್ನಲಾಗ್ತಿದೆ. ಖಾಸಗಿ ಶಾಲೆಗಳ ಒಕ್ಕೂಟ ಕೂಡ ಬಂದ್​ಗೆ ಬೆಂಬಲ ನೀಡಿರೋದ್ರಿಂದ ಮಕ್ಕಳಿಗೆ ಆನ್​ಲೈನ್ ಕ್ಲಾಸಸ್ ಇರಲ್ಲ ಅಂತ ಹೇಳಲಾಗ್ತಿದೆ. ಇನ್ನುಳಿದಂತೆ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಖಾಸಗಿ ಬಸ್​, ಆಟೋ, ಮೆಟ್ರೋ ಎಂದಿನಂತೆ ಸಂಚರಿಸಲಿವೆ. ಹೋಟೆಲ್, ಮಾಲ್, ಮಾರ್ಕೆಟ್, ಮೆಡಿಕಲ್ ಸೇರಿದಂತೆ ಉಳಿದ ಸೇವೆಗಳು ಎಂದಿನಂತೆ ಸಿಗಲಿದೆ. ಇನ್ನು ಬೆಂಗಳೂರನ್ನ ಡಿಸೆಂಬರ್ 9ಕ್ಕೆ ಬಂದ್ ಮಾಡಲಾಗುತ್ತೆ ಅಂತ ಹೇಳಲಾಗಿತ್ತು. ಆದ್ರೀಗ ರೈತ ಸಂಘಟನೆಗಳು ನಾಳೆಯೇ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕವನ್ನ ಬಂದ್ ಮಾಡಲು ಕರೆ ಕೊಟ್ಟಿವೆ.

-masthmagaa.com

Contact Us for Advertisement

Leave a Reply