masthmagaa.com:

ಕೊರೋನಾ ವೈರಸ್​​ಗೆ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್​ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್​’ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಭಾರತ್​ ಬಯೋಟೆಕ್ ಕಂಪನಿ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯಕ್ಕೆ (DCGI) ಅರ್ಜಿ ಸಲ್ಲಿದೆ. ಭಾರತದಲ್ಲಿ ಕೊರೋನಾ ಲಸಿಕೆಗೆ ಅನುಮತಿ ಕೋರಿದ 3ನೇ ಕಂಪನಿ ಇದಾಗಿದೆ. ಈ ಹಿಂದೆ ಅಮೆರಿಕದ ಫೈಝರ್ ಮತ್ತು ಭಾರತದ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಕೂಡ ಅನುಮತಿ ಕೇಳಿತ್ತು. ಆದ್ರೆ ಇದುವರೆಗೆ ಭಾರತದಲ್ಲಿ ಯಾವ ಲಸಿಕೆಗೂ ಅನುಮತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ಈ ಮೂರು ಕಂಪನಿಗಳ ಮನವಿಯನ್ನ ತಜ್ಞರ ಸಮಿತಿ ನಾಳೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಲಸಿಕೆಗಳ ಪೈಕಿ ಭಾರತ್ ಬಯೋಟೆಕ್​ನ ‘ಕೋವಾಕ್ಸಿನ್’ ಮತ್ತು ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಆಕ್ಸ್​ಫರ್ಡ್ ಲಸಿಕೆಯಾದ ‘ಕೋವಿಶೀಲ್ಡ್​’ ಲಸಿಕೆಗಳ ಮಾನವ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ. ಆದ್ರೆ ಫೈಝರ್​ ಲಸಿಕೆಯ ಮಾನವ ಪ್ರಯೋಗ ನಮ್ಮ ದೇಶದಲ್ಲಿ ನಡೆದಿಲ್ಲ. ಮತ್ತೊಂದು ವಿಚಾರ ಅಂದ್ರೆ ಫೈಝರ್ ಲಸಿಕೆ 95% ಪರಿಣಾಮಕಾರಿ ಅಂತ ಕಂಪನಿ ಘೋಷಿಸಿಕೊಂಡಿದೆ. ಆಕ್ಸ್​ಫರ್ಡ್ ಲಸಿಕೆಯ ಅರ್ಧ ಡೋಸ್ 90% ಪರಿಣಾಮಕಾರಿ, ಪೂರ್ತಿ ಡೋಸ್ 62% ಪರಿಣಾಮಕಾರಿ ಅಂತ ಕಂಪನಿ ಘೋಷಿಸಿಕೊಂಡಿದೆ. ಆದ್ರೆ ಭಾರತ್ ಬಯೋಟೆಕ್​ನ ‘ಕೋವಾಕ್ಸಿನ್​’ ಲಸಿಕೆ ಎಷ್ಟು ಪರಿಣಾಮಕಾರಿ ಅನ್ನೋದನ್ನ ಕಂಪನಿ ಇನ್ನೂ ಹೇಳಿಲ್ಲ. ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿ ಲಸಿಕೆಗೆ ಅನುಮೋದನೆ ಕೊಡಲಿದೆ. DCGI ಅನುಮೋದನೆ ಕೊಟ್ಟ ತಕ್ಷಣ ದೇಶದಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ, ಲಸಿಕೆ ಹಾಕುವ ಅಭಿಯಾನ ಶುರುವಾಗಲಿದೆ.

-masthmagaa.com

Contact Us for Advertisement

Leave a Reply