masthmagaa.com:

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚುನಾಯಿತ ಅಧ್ಯಕ್ಷ ಜೋ. ಬೈಡೆನ್ ನಡುವೆ ಜಂಗೀಕುಸ್ತಿ ನಡೆಯುತ್ತಿರುವ ನಡುವೆಯೇ ಭಾರತದ ಪ್ರಧಾನಿ ಮತ್ತು ಜೋ ಬೈಡೆನ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಬೈಡೆನ್ ಮತ್ತು ಕಮಲಾ ಹ್ಯಾರಿಸ್​​ ಗೆಲುವಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ನಾವು ಬದ್ಧ ಅಂತ ಪುನರುಚ್ಚರಿಸಿದ್ದೇವೆ. ಕೊರೋನಾ, ಹವಾಮಾನ ವೈಪರೀತ್ಯ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಹಕರಿಸುವ ಕುರಿತು ಕೂಡ ಮಾತನಾಡಿದ್ದೇವೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಅಂದ್ಹಾಗೆ ಟ್ರಂಪ್ ಮತ್ತು ಮೋದಿ ಸಂಬಂಧ ತುಂಬಾ ಉತ್ತಮವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಮೈ ಫ್ರೆಂಡ್ ಅಂತಾನೇ ಸಂಬೋಧಿಸುತ್ತಾರೆ. ಆದ್ರೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಾಗಿರುವ ಸೋಲನ್ನ ಟ್ರಂಪ್ ಒಪ್ಪಿಕೊಳ್ತಿಲ್ಲ. ಬೈಡೆನ್​ಗೆ​ ಅಧಿಕಾರ ಹಸ್ತಾಂತರ ಮಾಡ್ತಿಲ್ಲ. ಇಂತಹ ಸಂದರ್ಭದಲ್ಲೇ ಪ್ರಧಾನಿ ಮೋದಿ ಜೊತೆ ಜೋ. ಬೈಡೆನ್ ಮಾತನಾಡಿರೋದು ಗಮನಾರ್ಹ.

-masthmagaa.com

Contact Us for Advertisement

Leave a Reply