ಭಾರತ ಬಾಹ್ಯಾಕಾಶ ಕ್ಷೇತ್ರ ಮುಕ್ತಗೊಳಿಸಿದ ಬೆನ್ನಲ್ಲೇ 26 ಕಂಪನಿಗಳಿಂದ ಪ್ರಸ್ತಾವನೆ..!

masthmagaa.com:

ದೆಹಲಿ: ಭಾರತ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸುವ ನಿರ್ಧಾರ ಮಾಡಿದ ಕೆಲವೇ ತಿಂಗಳಲ್ಲಿ ಭಾರತ ಮೂಲದ 22 ಮತ್ತು 4 ವಿದೇಶಿ ಕಂಪನಿಗಳು ಪ್ರಸ್ತಾವನೆಯನ್ನು ಸಲ್ಲಿಸಿವೆ. ಇಸ್ರೋದಿಂದ ಹೊಸದಾಗಿ ರಚಿಸಲಾದ ಇನ್​​-ಸ್ಪೇಸ್​​ ಸಂಸ್ಥೆ ಈ ಪ್ರಸ್ಥಾವನೆಗಳನ್ನು ಪರಿಶೀಲಿಸುತ್ತಿದೆ. ಇವುಗಳ ಪೈಕಿ ಅಮೆರಿಕ ಮೂಲಕ ಜೆಫ್​​ ಬೆಜೋಸ್​​​ರ ಅಮೆಜಾನ್ ವೆಬ್ ಸರ್ವೀಸ್​​​​, ಭಾರ್ತಿ ಗ್ರೂಪ್ ಬೆಂಬಲಿತ ಇಂಗ್ಲೆಂಡ್ ಮೂಲದ ಒನ್ ವೆಬ್ ಕೂಡ ಸೇರಿವೆ.

ಇನ್​​​-ಸ್ಪೇಸ್​​ ( ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ & ಆಥರೈಸೇಷನ್ ಸೆಂಟರ್ ) ಮುಂದೆ ಗ್ರೌಂಡ್ ಸ್ಟೇಷನ್​​​ಗಳ ನಿರ್ಮಾಣ, ಸೆಟಲೈಟ್ ಉಡಾವಣಾ ವಾಹನಗಳು ಮತ್ತು  ಅಪ್ಲಿಕೇಷನ್​ಗಳನ್ನು ನಿರ್ಮಿಸಿಕೊಡಲು ಅನುಮತಿ ಕೋರಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಾಹ್ಯಾಕಾಶ ವಿಭಾಗದ ಕಾರ್ಯದರ್ಶಿ ಕೆ.ಸಿವನ್, ಎಲ್​​​&ಟಿ ಮತ್ತು ಭಾರ್ತಿ ಗ್ರೂಪ್​​​ನಂತಹ ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ ಸಣ್ಣಪುಟ್ಟ ಸ್ಟಾರ್ಟಪ್​​ಗಳು ಕೂಡ ಪ್ರಧಾನಿ ಮೋದಿಯವರ ವಿಷನ್​​​ಗೆ ಬೆಂಬಲಿಸುತ್ತಿದ್ದಾರೆ. ಅದೇ ರೀತಿ ಅಮೆಜಾನ್​​ನಂತಹ ವಿದೇಶಿ ಕಂಪನಿ ಕೂಡ ಭಾರತವನ್ನು ಜಾಗತಿಕ ಬಾಹ್ಯಾಕಾಶ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡಲು ಆಸಕ್ತಿ ತೋರಿಸುತ್ತಿದೆ ಅಂತ ಹೇಳಿದ್ದಾರೆ.

-masthmagaa.com

 

 

 

Contact Us for Advertisement

Leave a Reply