masthmagaa.com:

ಬಿಹಾರದಲ್ಲಿ ಮೂರನೇ ಹಂತದ ಮತದಾನ ಮುಗಿಯುತ್ತಿದ್ದಂತೇ ವಿವಿಧ ಏಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆ ಕೂಡ ಹೊರಬಿದ್ದಿದೆ. ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಒಟ್ಟು ಸ್ಥಾನ: 243

ಮ್ಯಾಜಿಕ್ ನಂಬರ್: 122

ಸಿ-ವೋಟರ್ ಸಮೀಕ್ಷೆ: ಮಹಾಘಟಬಂಧನ್​ಗೆ​ 108ರಿಂದ 131 ಕ್ಷೇತ್ರಗಳಲ್ಲಿ ಗೆಲುವು, ಎನ್​ಡಿಎಗೆ 104ರಿಂದ 128 ಸ್ಥಾನ

ಜನ್ ​ಕಿ ಬಾತ್ ಸಮೀಕ್ಷೆ: ಮಹಾಘಟಬಂಧನ್​ಗೆ 138 ಕ್ಷೇತ್ರಗಳಲ್ಲಿ ಜಯಭೇರಿ, ಎನ್​ಡಿಎಗೆ 91ರಿಂದ 117 ಸ್ಥಾನ

ಅಂದ್ರೆ ಬಹಳ ನೆಕ್​ ಟು ನೆಕ್​​ ಸ್ಪರ್ಧೆ ಕಾಣ್ತಿದೆ. ಒಂಚೂರು ಮಹಾಘಟಬಂಧನ್ನೇ​ ಮುಂದೆ ಇದ್ದಂತೆ ಕಾಣ್ತಿದೆ. ಕೇವಲ 6 ತಿಂಗಳ ಹಿಂದೆ ನಿತೀಶ್-ಬಿಜೆಪಿ ಮೈತ್ರಿಗೆ ಸವಾಲೇ ಇಲ್ಲ ಅನ್ನೋ ರೀತಿ ಇತ್ತು. ಆದ್ರೆ ಕಡೇ ಘಳಿಗೆಯಲ್ಲಿ ಲಾಲೂ ಪುತ್ರ, ಆರ್​ಜೆಡಿಯ ತೇಜಸ್ವಿ ಯಾದವ್​ ನಾಯಕತ್ವದಲ್ಲಿ ಮಹಾಘಟಬಂಧನ್​ ತೀವ್ರ ಸ್ಪರ್ಧೆ ನೀಡಿತ್ತು. ಈಗ ಎಕ್ಸಿಟ್ ಪೋಲ್ ಹೇಳೋದೇ ನಿಜವಾಗ್ಬಿಟ್ರೆ, ಲಾಲೂರ ಲಾಟೀನಿಗೆ ಲಾಟರಿ ಹೊಡೆಯಲಿದೆ. ತೇಜಸ್ವಿ ಯಾದವ್ ಸಿಎಂ ಆಗಲಿದ್ದಾರೆ. ಒಬ್ರಲ್ಲಾ ಒಬ್ರ ಜೊತೆ ಮೈತ್ರಿಯ ಅಂಟು ಹಾಕಿ ದಶಕದಿಂದ ಬಿಹಾರದ ಸಿಎಂ ಕುರ್ಚಿಗೆ ಅಂಟಿಕೊಂಡಿದ್ದ ನಿತೀಶ್ ಜಾಗ ಖಾಲಿ ಮಾಡಬೇಕಾಗುತ್ತೆ.

ಬಿಹಾರ ವಿಧಾನಸಭೆ ಚುನಾವಣೆಗೆ ಇವತ್ತು ಮೂರನೇ ಮತ್ತು ಕೊನೇ ಹಂತದ ಮತದಾನ ನಡೆಯಿತು. ಮೂರನೇ ಹಂತದಲ್ಲಿ 55.22%ನಷ್ಟು ಮತದಾನವಾಗಿದೆ ಅಂತ ಚುನಾವಣಾ ಆಯೋಗ ತಿಳಿಸಿದೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

-masthmagaa.com

Contact Us for Advertisement

Leave a Reply