ಪೊಲೀಸಪ್ಪನನ್ನು 50 ಮೀಟರ್ ಎಳೆದೊಯ್ದ ಬೈಕ್ ಸವಾರ..!

-masthmagaa.com:

ಮುಂಬೈ: ಚೆಕ್​ಪೋಸ್ಟ್​ನಲ್ಲಿ ಬೈಕ್ ಚೆಕ್ ಮಾಡಲು ಹೋದ 40 ವರ್ಷದ ಪೊಲೀಸಪ್ಪನನ್ನು ಬೈಕ್ ಸವಾರ 50 ಮೀಟರ್​​ವರೆಗೆ ಎಳೆದುಕೊಂಡು ಹೋಗಿದ್ದಾನೆ. ಮುಂಬೈನ ವಾಡಿಬಂಡರ್​ನಲ್ಲಿ ಈ ಘಟನೆ ವರದಿಯಾಗಿದೆ. ಖಜಬಿ ಶೇಖ್ ನೇಮ್​ ಎಂಬ 42 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಸದ್ಯ ಗಾಯಗೊಂಡ ವಿಜೇಂದ್ರ ಧುರತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಎಲ್ಲಾ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಂದ ಬೈಕ್ ಸವಾರ ಅನುಮಾನಾಸ್ಪದವಾಗಿ ಕಂಡು ಬಂದಿದ್ದರಿಂದ ಪೊಲೀಸ್ ವಿಜೇಂದ್ರ ಧುರತ್​​ ತಡೆದಿದ್ದಾರೆ. ಆದ್ರೆ ಈ ವೇಳೆ ಬೈಕ್ ಸವಾರ ಈ ದುಷ್ಕೃತ್ಯ ಎಸಗಿದ್ದಾನೆ. ಸದ್ಯ ಬೈಕ್ ಸವಾರ ಖಜಬಿ ಶೇಖ್ ನೇಮ್ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply