masthmagaa.com:

ಕೊರೋನಾ ಸೋಂಕು ಹರಡೋದನ್ನ ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸೋದನ್ನ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದೇ ಓಡಾಡೋರನ್ನ ಹಿಡಿದು ದಂಡ ಹಾಕುವ ಪ್ರಕರಣ ದಿನನಿತ್ಯ ವರದಿಯಾಗ್ತಾನೇ ಇರುತ್ತೆ. ಹೀಗೆ ಮಾಸ್ಕ್ ಹಾಕದವರಿಂದ ಮುಂಬೈ ಮಹಾನಗರ ಪಾಲಿಕೆ ಇದುವರೆಗೆ ಬರೋಬ್ಬರಿ 4.79 ಕೋಟಿ ರೂಪಾಯಿ ಹಣ ವಸೂಲಿ ಮಾಡಿದೆ. ಇದು ಏಪ್ರಿಲ್​ನಿಂದ ಇದುವರೆಗೆ ವಸೂಲಿ ಮಾಡಿದ ದಂಡದ ಮೊತ್ತವಾಗಿದೆ. ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ತುಂಬಾ ಜಾಸ್ತಿ ಇತ್ತು. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣ ದೃಢಪಡುತ್ತಿತ್ತು. ಆದ್ರೂ ಕೂಡ ಮಾಸ್ಕ್ ಹಾಕಿ ಅಂದ್ರೆ ಕೆಲವರು ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ಓಡಾಡಿದ್ದರು. ಅಂಥವರಿಂದ ಸರ್ಕಾರದ ಖಜಾನೆಗೆ 4.79 ಕೋಟಿ ರೂಪಾಯಿ ಹರಿದು ಬಂದಿದೆ. ಇದು ಕೇವಲ ಮುಂಬೈ ಲೆಕ್ಕ. ಇನ್ನು ಮಹಾರಾಷ್ಟ್ರದ್ದು, ಕರ್ನಾಟಕದ್ದು, ಇಡೀ ದೇಶದ್ದು ಎಷ್ಟಾಗಿರಬಹುದು ಅಲ್ವಾ..?

-masthmagaa.com

Contact Us for Advertisement

Leave a Reply