ಸಿಎಎ ಕಾಯ್ದೆಯಡಿ ಜನವರಿಯಿಂದಲೇ ವಲಸಿಗರಿಗೆ ಪೌರತ್ವ..!

masthmagaa.com:

ಪಶ್ಚಿಮ ಬಂಗಾಳ: ಸಿಎಎ ಅಂದ್ರೆ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಮುಂದಿನ ಜನವರಿಯಿಂದಲೇ ವಲಸಿಗರಿಗೆ ಪೌರತ್ವ ನೀಡಲಾಗುತ್ತೆ ಅಂತ ಪಶ್ಚಿಮ ಬಂಗಾಳ ಹಿರಿಯ ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಹೇಳಿದ್ದಾರೆ. ಪಶ್ಚಿಮ ಬಂಗಾಳದ 24 ಪರಗಣದಲ್ಲಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್​​​​​ಗೆ ವಲಸಿಗರ ಬಗ್ಗೆ ಸಹಾನುಭೂತಿ ಇಲ್ಲ. ಆದ್ರೆ ಇನ್ನುಮುಂದೆ ಈ ಅನ್ಯಾಯ ನಡೆಯೋದಿಲ್ಲ.. ಮುಂದಿನ ಜನವರಿಯಿಂದಲೇ ವಲಸಿಗರಿಗೆ ಪೌರತ್ವ ನೀಡಲಾಗುತ್ತೆ ಅನ್ನೋ ಭರವಸೆ ಇದೆ. ಕೇಂದ್ರ ಸರ್ಕಾರ ಬೇರೆ ದೇಶಗಳಲ್ಲಿ ಹಿಂಸೆಗೆ ಒಳಗಾಗಿ ಭಾರತಕ್ಕೆ ಬಂದಿರುವ ವಲಸಿಗರಿಗೆ ಪೌರತ್ವ ನೀಡುವ ಒಳ್ಳೆಯ ಉದ್ದೇಶದಿಂದ ಸಿಎಎ ಜಾರಿಗೆ ತಂದಿದೆ ಅಂತ ಹೇಳಿದ್ದಾರೆ.

ಅಂದಹಾಗೆ ಬಿಜೆಪಿ ಕಳೆದ ವರ್ಷ ಡಿಸೆಂಬರ್​​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಾಸ್ ಮಾಡಿತ್ತು. ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ಒಳಗಾಗಿ 2014ಕ್ಕೂ ಮೊದಲು ಭಾರತಕ್ಕೆ ಬಂದ ಆ ದೇಶಗಳಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಒಂದು ಕಾಯ್ದೆಯಾಗಿದೆ. ಆದ್ರೆ ಇದಕ್ಕೆ ದೇಶದಾದ್ಯಂತ ಭಾರಿ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಹಲವೆಡೆ ಪ್ರತಿಭಟನೆ ಹಿಂಸಾಚಾರದ ರೂಪ ಕೂಡ ಪಡೆದುಕೊಂಡಿತ್ತು. ಆದ್ರೆ ಕೊರೋನಾ ಮಹಾಮಾರಿ ಹಾವಳಿ ಇಟ್ಟಿದ್ದರಿಂದ ಪ್ರತಿಭಟನೆ ತಣ್ಣಗಾಗಿತ್ತು.

-masthmagaa.com

Contact Us for Advertisement

Leave a Reply