massthmagaa.com:

ʻನಾನು ಜೈಲಿನಲ್ಲಿದ್ದಾಗ ನನ್ನ ಸೆಲ್‌ ಹಾಗೂ ಬಾತ್‌ರೂಮ್‌ನಲ್ಲಿ ಕ್ಯಾಮರಾಗಳನ್ನ ಅಳವಡಿಸಲಾಗಿತ್ತು’ ಅಂತ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಂ ನವಾಜ್ ಷರೀಫ್ ಗಂಭೀರ ಆರೋಪ ಮಾಡಿದ್ದಾರೆ. ಮರಿಯಂ ನವಾಜ್ ಷರೀಫ್ ಪಾಕಿಸ್ತಾನ್‌ ಮುಸ್ಲೀಂ ಲೀಗ್‌ ನವಾಜ್ (PML-N) ಪಕ್ಷದ‌ ಉಪಾಧ್ಯಕ್ಷೆ ಕೂಡ ಹೌದು. ಅಂದ್ಹಾಗೆ ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮರಿಯಂ ಅವರನ್ನ ಪಾಕಿಸ್ತಾನದ ನ್ಯಾಷನಲ್ ಅಕೌಂಟೇಬಿಲಿಟಿ ಬ್ಯೂರೊ (NAB) ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಬಂಧನದ ವೇಳೆ ಮತ್ತು ಬಳಿಕ ತಮ್ಮನ್ನ ಯಾವ ರೀತಿ ನಡೆಸಿಕೊಳ್ಳಲಾಯ್ತು ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಮರಿಯಂ ಬಾಯಿ ಬಿಟ್ಟಿದ್ದಾರೆ. ʻಎರಡು ಬಾರಿ ಜೈಲಿಗೆ ಹೋಗಿರುವ ನನ್ನನ್ನ ಹೇಗೆ ಟ್ರೀಟ್‌ ಮಾಡಿದ್ದಾರೆ ಅಂತ ಹೇಳಿದ್ರೆ ಸರ್ಕಾರ ಮುಖ ತೋರ್ಸೋಕೂ ಆಗಲ್ಲ. ಆ ರೀತಿ ನನ್ನನ್ನ ನಡೆಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಾಗಲೀ ಅಥವಾ ಬೇರೆ ಯಾವುದೇ ದೇಶದಲ್ಲಾಗಲೀ ಮಹಿಳೆಯರು ದುರ್ಬಲ ಅಂತ ಯಾರೂ ತಿಳಿಯಬಾರದು’ ಅಂತ ಮರಿಯಂ ನವಾಜ್ ಷರೀಫ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply