ಭಾರತಕ್ಕೆ ಫೈಜರ್ ಲಸಿಕೆ..? ಒಪ್ಪಿಗೆ ಕೊಡುತ್ತಾ ಸರ್ಕಾರ..?

masthmagaa.com:

ದೆಹಲಿ: ತನ್ನ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಫೈಜರ್ ಸಂಸ್ಥೆ ಭಾರತ ಸರ್ಕಾರದ ಬಳಿ ಅನುಮತಿ ಕೋರಿದೆ.  ಫೈಜರ್ ಮತ್ತು ಬಿಯೋನ್​ಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಅಂತ ಘೋಷಿಸಿಕೊಂಡಿದ್ದು, ಈಗಾಗಲೇ ಇಂಗ್ಲೆಂಡ್ ಮತ್ತು ಬರೇನ್ ದೇಶಗಳು ಗ್ರೀನ್ ಸಿಗ್ನಲ್ ನೀಡಿವೆ. ಇದೀಗ ಭಾರತದ ಡಿಸಿಜಿಐ ಅಂದ್ರೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯದ ಬಳಿ ಫೈಜರ್ ಸಂಸ್ಥೆ ಅನುಮತಿ ಕೋರಿದೆ. ಈ ಮೂಲಕ ಭಾರತದ ಬಳಿ ಅನುಮತಿ ಕೇಳಿರುವ ಮೊದಲ ಸಂಸ್ಥೆ ಫೈಜರ್ ಆಗಿದೆ.

ಭಾರತಕ್ಕೆ ಲಸಿಕೆಯ ಆಮದು ಮತ್ತು ಮಾರಾಟ, ವಿತರಣೆಗೆ ಒಪ್ಪಿಗೆ ನೀಡುವಂತೆ ಸಂಸ್ಥೆಯೇನೋ ಅನುಮತಿ ಕೋರಿದೆ. ಆದ್ರೆ ಇದಕ್ಕೆ ಭಾರತ ಒಪ್ಪುತ್ತಾ ಅನ್ನೋದು ದೊಡ್ಡ ಪ್ರಶ್ನೆ.. ಯಾಕಂದ್ರೆ ಭಾರತದಲ್ಲಿರೋ ನಿಯಮಗಳ ಪ್ರಕಾರ ದೇಶದಲ್ಲಿ ಪ್ರಯೋಗ ನಡೆಸದ ಲಸಿಕೆಗಳನ್ನು ಬಳಕೆಗೆ ಅನುಮತಿ ನೀಡುವಂತಿಲ್ಲ. ಆದ್ರೆ ಕೊರೋನಾ ಒಂದು ವಿಶ್ವಮಟ್ಟದ ಮಹಾಮಾರಿಯಾಗಿರೋದ್ರಿಂದ ಭಾರತ ಒಪ್ಪಿಗೆ ನೀಡುವ ಬಗ್ಗೆ ಚಿಂತಿಸಬಹುದು.. ಆದ್ರೂ ಕೂಡ ಮತ್ತೊಂದು ಸಮಸ್ಯೆ ಎದುರಾಗುತ್ತೆ. ಭಾರತದಲ್ಲಿರೋ ವ್ಯಾಕ್ಸಿನ್ ಸ್ಟೋರೇಜ್​ಗಳಲ್ಲಿ ಕೆಲವು  2ರಿಂದ 8 ಡಿಗ್ರಿ ತಾಮಪಾನದ್ದಾಗಿದ್ರೆ, ಇನ್ನು ಕೆಲವು ಮೈನಸ್ 20 ಡಿಗ್ರಿ ತಾಪಮಾನದ್ದಾಗಿವೆ. ಆದ್ರೆ ಫೈಜರ್  ಲಸಿಕೆಯನ್ನು ಶೇಖರಿಸಿಡಲು ಮೈನಸ್ 70 ಡಿಗ್ರಿ ತಾಪಮಾನದ ಅಗತ್ಯತೆ ಇದೆ. ಹೀಗಾಗಿ ಸರ್ಕಾರ ಒಪ್ಪಿಗೆ ನೀಡಿ ಫೈಜರ್ ಸಂಸ್ಥೆ ಲಸಿಕೆ ಆಮದು ಮಾಡಿಕೊಂಡರೂ ಸಂಗ್ರಹಣೆ ಮಾಡೋದು ಎಲ್ಲಿ ಅನ್ನೋ ಪ್ರಶ್ನೆ ಎದುರಾಗುತ್ತೆ.

masthmagaa.com:

Contact Us for Advertisement

Leave a Reply