ಒಂದಿಂಚೂ ಭೂಮಿ ಬಿಟ್ಟುಕೊಡಲ್ಲ ಎಂದ ಚೀನಾ..! ಭಾರತ ಶಾಂತಿ ಮಂತ್ರ..!

masthmagaa.com:

ಮಾಸ್ಕೋ: ಲಡಾಕ್ ಗಡಿಯಲ್ಲಿ ನಡೆಯುತ್ತಿರುವ ಎಲ್ಲಾ ಸಂಘರ್ಷಕ್ಕೂ ಭಾರತವೇ ಹೊಣೆ, ನಾವು ಯಾವುದೇ ಕಾರಣಕ್ಕೂ ಒಂದೇ ಒಂದು ಇಂಚು ಪ್ರದೇಶವನ್ನು ಕೂಡ ಕಳೆದುಕೊಳ್ಳುವುದಿಲ್ಲ ಅಂತ ಚೀನಾ ರಕ್ಷಣಾ ಸಚಿವ ವೇ ಫೆಂಗಿ ಹೇಳಿದ್ಧಾರೆ. ರಷ್ಯಾದ ಮಾಸ್ಕೋದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ವೇ ಫೆಂಗಿ ನಡುವೆ ಉನ್ನತ ಮಟ್ಟದ ಸಭೆ ನಡೀತು. ಬಳಿಕ ಮಾತನಾಡಿದ ಫೆಂಗಿ, ಭಾರತ ಚೀನಾ ನಡುವೆ ಗಡಿಯಲ್ಲಿ ವಿವಾದ ಇರೋದು ನಿಜ.. ಅದಕ್ಕೆಲ್ಲಾ ಭಾರತವೇ ಕಾರಣ.. ಚೀನಾ ಒಂದಿಚೂ ಭೂಮಿ ಬಿಟ್ಟುಕೊಡಲ್ಲ. ಚೀನಾದ ಸೇನೆ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಸಮರ್ಥರಾಗಿದ್ದು, ಸದೃಢ ಮತ್ತು ಆತ್ಮವಿಶ್ವಾಸದಿಂದಿದೆ ಅಂತ ಹೇಳಿದ್ದಾರೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಅಂತ ಹೇಳಿದ್ದಾರೆ.

ನಂತರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಶಾಂತಿಗಾಗಿ ಮನವಿ ಮಾಡಿದ್ರು. ಜೊತೆಗೆ ಕಾರ್ಯಾಚರಣೆಗಳನ್ನು ಕೈಗೊಂಡ್ರೆ ಸ್ಥಿತಿ ಮತ್ತಷ್ಟು ಗಂಭೀರವಾಗಬಹುದು. ಗಡಿಪ್ರದೇಶಗಳಲ್ಲಿ ಮತ್ತಷ್ಟು ಸಂಘರ್ಷ ಸಂಭವಿಸಬಹುದು. ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾಧ್ಯಮಗಳ ಮೂಲಕ ಮಾತುಕತೆ ನಡೆಸಬೇಕು. ಈ ಮೂಲಕ ಎಲ್​ಎಸಿಯಲ್ಲಿ ಮೊದಲಿದ್ದಂತೆ ಶಾಂತಿ ನೆಲೆಸುವಂತೆ ಮಾಡಬೇಕು ಅಂತ ಹೇಳಿದ್ದಾರೆ.

ಎಸ್​​ಸಿಒ ಅಂದ್ರೆ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್​​ ಸಭೆ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಗೆ ತೆರಳಿದ್ದಾರೆ. ಇದರ ನಡುವೆಯೇ ಚೀನಾ ರಕ್ಷಣಾ ಸಚಿವರ ಜೊತೆ ಸುಮಾರು 2 ಗಂಟೆ 20 ನಿಮಿಷಗಳ ಕಾಲ ಸಭೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply