masthmagaa.com:

ಈ ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳು ಎದುರಿಸಿದ ನೈಸರ್ಗಿಕ ವಿಪತ್ತಿಗೆ ಸಂಬಂಧಿಸಿದಂತೆ 6 ರಾಜ್ಯಗಳಿಗೆ 4,382 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಸಿಕ್ಕಿಂ ರಾಜ್ಯಗಳು ಸೇರಿಕೊಂಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಎನ್​ಡಿಆರ್​ಫ್​ನಿಂದ 4,381.88 ಕೋಟಿ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

‘ಅಂಫಾನ್’ ಚಂಡಮಾರುತದಿಂದ ತತ್ತರಿಸಿದ ಪಶ್ಚಿಮ ಬಂಗಾಳಕ್ಕೆ ₹2,707.77 ಕೋಟಿ ಮತ್ತು ಒಡಿಶಾಗೆ ₹128.23 ಕೋಟಿ… ‘ನಿಸರ್ಗ’ ಚಂಡಮಾರುತದಿಂದ ತತ್ತರಿಸಿದ ಮಹಾರಾಷ್ಟ್ರಕ್ಕೆ ₹268.59 ಕೋಟಿ.. ಪ್ರವಾಹ ಮತ್ತು ಭೂಕುಸಿತಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ₹577.84 ಕೋಟಿ, ಮಧ್ಯಪ್ರದೇಶಕ್ಕೆ ₹611.61 ಕೋಟಿ ಮತ್ತು ಸಿಕ್ಕಿಂಗೆ 87.84 ಕೋಟಿ ನೆರವು ಬಿಡುಗಡೆಯಾಗಲಿದೆ.

-masthmagaa.com

Contact Us for Advertisement

Leave a Reply