ಕೊರೋನಾ ಹೆಲ್ಮೆಟ್ ಮೂಲಕ ಪೊಲೀಸರಿಂದ ಜಾಗೃತಿ

masthmagaa.com:

ಚೆನ್ನೈ: ದೇಶದಲ್ಲಿ ಕೊರೋನಾ ವೈರಸ್ ಹಾವಳಿ ಮಿತಿ ಮೀರಿದೆ. ಈ ನಡುವೆ ಚೆನ್ನೈನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೊರೋನಾ ವೈರಸ್ ಹೆಲ್ಮೆಟ್ ಧರಿಸಿ, ಜಾಗೃತಿ ಮೂಡಿಸಿದ್ದಾರೆ. ಸ್ಥಳೀಯ ಕಲಾಕಾರರು ಮತ್ತು ಪೊಲೀಸರು ಸೇರಿಕೊಂಡು ಹೆಲ್ಮೆಟ್ ರಚಿಸಿದ್ದು, ಇದಕ್ಕೆ ಕೊರೋನಾ ಹೆಲ್ಮೆಟ್ ಎಂದು ಹೆಸರಿಟ್ಟಿದ್ಧಾರೆ.

ಈ ಬಗ್ಗೆ ಮಾತನಾಡಿದ ಕಲಾವಿದ ಗೌತಮ್, ಸಾರ್ವಜನಿಕರು ಕೊರೋನಾದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ರೆ ಜನರು ಮನೆಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡ್ತಿದ್ದಾರೆ. ನಾನು ಹಳೆಯ ಹೆಲ್ಮೆಟ್ ಮತ್ತು ಪೇಪರ್​​ಗಳನ್ನು ಬಳಸಿ ಈ ಕೊರೋನಾ ಹೆಲ್ಮೆಟ್ ರಚಿಸಿದ್ದೇನೆ. ಅಲ್ಲದೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಹಲವು ಭಿತ್ತಿಪತ್ರಗಳನ್ನು ರಚಿಸಿ, ನೀಡಿದ್ದೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply