masthmagaa.com:

ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಲಸಿಕೆ 2021ರ ಫೆಬ್ರವರಿ ವೇಳೆಗೆ ಸಿಗಬಹುದು ಅಂತ ಸೀರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅಡರ್ ಪೂನಾವಾಲಾ ಹೇಳಿದ್ದಾರೆ. ಫೆಬ್ರವರಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಲಭ್ಯವಾಗಲಿದೆ. ಅದಾಗಿ ಎರಡು ತಿಂಗಳು ಅಂದ್ರೆ ಏಪ್ರಿಲ್​​ ವೇಳೆಗೆ ಜನ ಸಾಮಾನ್ಯರಿಗೂ ಲಸಿಕೆ ಸಿಗಲಿದೆ ಅಂತ ಅವರು ಹೇಳಿದ್ದಾರೆ. ಎಲ್ಲರೂ ಲಸಿಕೆಯ ಎರಡು ಡೋಸ್ ಹಾಕಿಸಿಕೊಳ್ಳಬೇಕಾಗುತ್ತದೆ. ಈ ಎರಡು ಡೋಸ್​ಗೆ ಗರಿಷ್ಠ 1,000 ರೂಪಾಯಿ ಫಿಕ್ಸ್ ಮಾಡಲಾಗುತ್ತೆ. ಅದಕ್ಕಿಂತ ಕಮ್ಮಿನೂ ಆಗಬಹುದು. ದೇಶದ ಎಲ್ಲಾ ಜನತೆಗೂ ಎರಡು ಡೋಸ್ ಲಸಿಕೆ ಹಾಕಲು 2024ನೇ ಇಸವಿ ಆಗಬಹುದು ಅಂತಾನೂ ಅಡರ್ ಪೂನಾವಾಲಾ ತಿಳಿಸಿದ್ದಾರೆ. ಇವೆಲ್ಲವೂ ಅಂತಿಮ ಹಂತದ ಮಾನವ ಪ್ರಯೋಗ ಮತ್ತು ಸರ್ಕಾರ ನೀಡುವ ಅನುಮೋದನೆ ಮೇಲೆ ನಿರ್ಧಾರವಾಗಲಿದೆ.

ಆದ್ರೆ ಮಕ್ಕಳಿಗೆ ಕೊರೋನಾ ವೈರಾಣು ಹೆಚ್ಚು ತೊಂದರೆ ಕೊಡದೇ ಇರೋದ್ರಿಂದ ಮಕ್ಕಳಿಗೆ ಈ ಲಸಿಕೆ ಸಿಗೋದು ಸ್ವಲ್ಪ ತಡವಾಗಬಹುದು. ಸುಮಾರು 4 ತಿಂಗಳು ಕಾಯಬೇಕಾಗಬಹುದು ಅಂತ ಪೂನಾವಾಲಾ ಹೇಳಿದ್ದಾರೆ. ಕೊರೋನಾ ಹಾವಳಿಯಿಂದ ಮುಚ್ಚಿರುವ ಶಾಲೆಗಳನ್ನ ತೆರೆಯಲು ಲಸಿಕೆ ಬರಲಿ ಅಂತ ಕಾಯ್ತಿದ್ದವರಿಗೆ ಈ ವಿಚಾರ ಮತ್ತಷ್ಟು ಗೊಂದಲ ಉಂಟು ಮಾಡಿದೆ. ಈಗ ಶಾಲೆಗಳನ್ನ ತೆರೆಯಬೇಕೋ ಅಥವಾ ಇನ್ನು ಏಳೆಂಟು ತಿಂಗಳು ಕಾಯಬೇಕು ಅನ್ನೋ ಪ್ರಶ್ನೆ ಮೂಡಿದೆ.

ಅಂದ್ಹಾಗೆ ಪುಣೆ ಮೂಲದ ಸೀರಂ ಇನ್​​ಸ್ಟಿಟ್ಯೂಟ್​ ಆಫ್ ಇಂಡಿಯಾ ಕಂಪನಿ ಆಸ್ಟ್ರಾಝೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಭಾರತದಲ್ಲಿ ಆಕ್ಸ್​ಫರ್ಡ್ ಲಸಿಕೆಯ ಉತ್ಪಾದನೆ ಮತ್ತು ಮಾನವ ಪ್ರಯೋಗದ ಜವಾಬ್ದಾರಿ ಸೀರಂ ಕಂಪನಿ ನೋಡಿಕೊಳ್ಳುತ್ತದೆ. ಭಾರತದಲ್ಲಿ ಆಕ್ಸ್​ಫರ್ಡ್​ ಲಸಿಕೆಗೆ ‘ಕೋವಿಶೀಲ್ಡ್​’ ಅಂತ ಹೆಸರಿಡಲಾಗಿದೆ.

-masthmagaa.com

Contact Us for Advertisement

Leave a Reply