masthmagaa.com:

ಜಗತ್ತು ಇನ್ನು 4ಜಿನಲ್ಲಿ ನಡೀತಾ ಇದೆ, 5ಜಿ ಬಗ್ಗೆ ಚಿಂತನೆ ಆಗ್ತಾ ಇದೆ. ಆದ್ರೆ ಚೀನಾ ಈಗಾಗಲೇ 6ಜಿ ಕಡೆ ಹೊರಟಿದೆ. ಹೌದು, ವಿಶ್ವದ ಮೊದಲ 6ಜಿ ಎಕ್ಸಪರಿಮೆಂಟಲ್ ಸ್ಯಾಟಲೈಟ್​ ಅನ್ನು ಚೀನಾ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ತೈಯುವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇತರ 12 ಉಪಗ್ರಹಗಳೊಂದಿಗೆ 6ಜಿ ಉಪಗ್ರಹ ಕೂಡ ಉಡಾವಣೆಯಾಗಿ ಕಕ್ಷೆ ಸೇರಿದೆ. ಅಂದ್ಹಾಗೆ ಈ 6ಜಿ ಪ್ರಯೋಗಾತ್ಮಕ ಉಪಗ್ರಹವು ಬಾಹ್ಯಾಕಾಶದಲ್ಲಿ ಟೆರಾಹರ್ಟ್ಝ್​​​ (THz) ಸಂವಹನ ತಂತ್ರಜ್ಞಾನವನ್ನು ಪರಿಶೀಲಿಸುತ್ತದೆ, ಬಾಹ್ಯಾಕಾಶ ಸಂವಹನದಲ್ಲಿ ಇದೊಂದು ಅತಿದೊಡ್ಡ ಗೆಲುವು ಅಂತ ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply