ಸೇನೆಗೆ ಮತ್ತಷ್ಟು ಅಧಿಕಾರಗಳನ್ನು ನೀಡಿದ ಕ್ಸಿ ಜಿನ್​ಪಿಂಗ್ ಸರ್ಕಾರ..!

masthmagaa.com:

ಚೀನಾ: ರಾಷ್ಟ್ರೀಯ ರಕ್ಷಣಾ ಕಾನೂನಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ಕ್ಸಿ ಜಿನ್​ಪಿಂಗ್ ನೇತೃತ್ವದ ಸಶಸ್ತ್ರ ಪಡೆಯ ಅಧಿಕಾರಗಳನ್ನು ಹೆಚ್ಚಿಸಲಾಗಿದೆ. ದೇಶದ ಒಳಗೆ ಮತ್ತು ದೇಶದ ಹೊರಗೆ ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳೋದು ಇದರ ಉದ್ದೇಶವಾಗಿದೆ. ಇದು ಸ್ಟೇಟ್​ ಕೌನ್ಸಿಲ್ ಮತ್ತು ಚೀನಾ ಮಂತ್ರಿ ಮಂಡಲದ ಮುಖ್ಯಸ್ಥ ಲಿ ಕೇಕಿಯಾಂಗ್ ಅವರ ಮಿಲಿಟರಿ ನೀತಿಗಳನ್ನು ರೂಪಿಸುವ ಅಧಿಕಾರವನ್ನು ಕಡಿತಗೊಳಿಸಲಿದೆ. ಜೊತೆಗೆ ಸೆಂಟ್ರಲ್ ಮಿಲಿಟರಿ ಕಮಿಷನ್​​ಗೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ನೀಡಲಿದೆ. ಇವರೆಲ್ಲರಿಗಿಂತಲೂ ಟಾಪ್ ಪೊಸಿಷನ್​​ನಲ್ಲಿ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಇರಲಿದ್ದಾರೆ.

ಈಗಾಗಲೇ ಚೀನಾದ ಕಮ್ಯೂನಿಸ್ಟ್​ ಪಾರ್ಟಿ ಸಂಸ್ಥಾಪಕ ಮಾವೋ ತ್ಸೇ ತುಂಗ್ ಬಳಿಕ ಅತೀ ಶಕ್ತಿಶಾಲಿ ನಾಯಕನಾಗಿ ಕ್ಸಿ ಜಿನ್​ಪಿಂಗ್ ಬೆಳೆದಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿನ್​ಪಿಂಗ್​, ಜೀವನ ಪರ್ಯಂತ ಅಧ್ಯಕ್ಷರಾಗಿರುವಂತೆ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಕಳೆದ ನವೆಂಬರ್​​ನಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ, 2027ರ ವೇಳೆಗೆ ಸೇನೆಯನ್ನು ಅಮೆರಿಕಗಿಂತ ಆಧುನೀಕರಣಗೊಳಿಸುವ ಪ್ಲಾನ್​​​ನ್ನು ಅಂತಿಮಗೊಳಿಸಿತ್ತು. ಇದೀಗ ಸೇನೆಗೆ ಮತ್ತಷ್ಟು ಅಧಿಕಾರಗಳನ್ನು ನೀಡಿದೆ..

-masthmagaa.com

Contact Us for Advertisement

Leave a Reply