masthmagaa.com:

ರಾಜ್ಯ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬಗ್ಗೆ ಹೈಕಮಾಂಡ್​ ಜೊತೆ ಚರ್ಚಿಸಲು ದೆಹಲಿಗೆ ಹೋಗಿದ್ದ ಸಿಎಂ ಬಿ.ಎಸ್​. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಬಿಎಸ್​ವೈ, ‘ಡಿಸೆಂಬರ್ 7ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಮುಂದಿನ ಎರಡ್ಮೂರು ದಿನಗಳ ಒಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಅವಕಾಶ ಮಾಡಿಕೊಡಿ. ಹೊಸಬರನ್ನ ಸಂಪುಟಕ್ಕೆ ಸೇರಿಸಲು ಅವಕಾಶ ಮಾಡಿಕೊಡಿ ಅಂತ ಕೇಳಿದ್ದೀನಿ. ಇನ್ನೊಂದು ಎರಡ್ಮೂರು ದಿನಗಳಲ್ಲಿ ಅವರು ಚರ್ಚೆ ಮಾಡಿ ಹೇಳ್ತಾರೆ. ಒಳ್ಳೆಯ ರೀತಿಯಲ್ಲಿ ಮಾತುಕತೆ ನಡೆದಿದೆ’ ಅಂತ ಹೇಳಿದ್ದಾರೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಅಂತ ಕೇಳಿದ ಪ್ರಶ್ನೆಗೆ, ‘ನೋಡೋಣ.. ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಏನು ನಿರ್ದೇಶನ ಕೊಡ್ತಾರೋ ಅದರಂತೆ ಮಾಡ್ತೀವಿ’ ಅಂತ ಹೇಳಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ‘ಪ್ರಧಾನಿ ಮೋದಿ ಅವರು ಇನ್ನೊಂದು ಅವಧಿಗೆ ಚುನಾವಣೆ ನಿಂತು ಗೆಲ್ಲಬೇಕು ಅನ್ನೋದು ನನ್ನ ಆಸೆ’ ಅಂತ ಕೂಡ ಹೇಳಿದ್ರು.

-masthmagaa.com

Contact Us for Advertisement

Leave a Reply