masthmagaa.com:

ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಇವತ್ತು 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಇವರ ಹೆಸರು ಕರ್ನಲ್​​ ಪ್ರಿತಿಪಾಲ್ ಸಿಂಗ್ ಗಿಲ್​.. ಇವರು ಎರಡನೇ ಮಹಾಯುದ್ಧ ಮತ್ತು 1965ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರು ರಾಯಲ್ ಇಂಡಿಯನ್ ಏರ್​ಫೋರ್ಸ್​ನಲ್ಲಿ ಪೈಲಟ್ ಆಗಿ ಮೊದಲು ಸೇವೆ ಸಲ್ಲಿಸಿದ್ರು. ಬಳಿಕ ನೌಕಾಸೇನೆಯಲ್ಲಿದ್ರು, ನಂತರ 1965ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಭೂಸೇನೆಯಲ್ಲಿ ಗನ್ನರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ರು. ನಿವೃತ್ತಿಗೂ ಮುನ್ನ ಅಸ್ಸಾಂ ರೈಫಲ್ಸ್ ಸೆಕ್ಟರ್ ಕಮಾಂಡರ್ ಆಗಿ ಮಣಿಪುರದಲ್ಲಿ ಸೇವೆ ಸಲ್ಲಿಸಿದ್ರು ಕೊಲೊನಿಲ್ ಪ್ರಿತಿಪಾಲ್ ಸಿಂಗ್ ಗಿಲ್. ಹ್ಯಾಪಿ ಬರ್ತ್​ಡೇ ಕರ್ನಲ್​​ ಪ್ರೀತಿಪಾಲ್ ಸಿಂಗ್ ಗಿಲ್​..

-masthmagaa.com

Contact Us for Advertisement

Leave a Reply