ಮನೆ ಮನೆಗೆ ಕಾಂಡೋಮ್​​! ಲಾಕ್​ಡೌನ್ ನಡುವೆ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ

masthmagaa.com:

ಉತ್ತರ ಪ್ರದೇಶ: ಲಾಕ್​ಡೌನ್ ನಡುವೆ ಹಲವೆಡೆ ಕೌಟುಂಬಿಕ ಕಲಹಗಳ ಬಗ್ಗೆ ವರದಿಯಾಗುತ್ತಿದ್ರೆ, ಇನ್ನು ಹಲವೆಡೆ ಜನಸಂಖ್ಯೆ ಹೆಚ್ಚುವ ಭೀತಿ ಎದುರಾಗಿದೆ. ಪತಿ ಮತ್ತು ಪತ್ನಿ ಮನೆಯಲ್ಲೇ ಇರೋದ್ರಿಂದ ಈ ಆತಂಕ ಶುರುವಾಗಿದೆ. ಹೀಗಾಗಿ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳನ್ನು ನೀಡಲು  ಪ್ಲಾನ್ ಮಾಡಿದೆ. ಅದರಂತೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಇವುಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ಜನಸಂಖ್ಯೆ ಹೆಚ್ಚಳದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply