ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಸುವಂತೆ ಅಮೆರಿಕ ಕರೆ

masthmagaa.com:

ದೆಹಲಿ: ಇತ್ತೀಚೆಗಷ್ಟೇ ಅಮೆರಿಕ ಕೇಂದ್ರ ಸರ್ಕಾರದ ಕೃಷಿ ಕಾನೂನಿಗೆ ಬೆಂಬಲಿಸೋ ಜೊತೆಗೆ ರೈತರ ಶಾಂತಿಯುತ ಪ್ರತಿಭಟನೆಗೂ ಜೈ ಅಂದಿತ್ತು. ಆದ್ರೀಗ ಭಾರತಕ್ಕೆ ಸಂಬಂಧಿಸಿದ ಅಮೆರಿಕ ಸಂಸತ್​​ನ ಸಂಸದೀಯ ಸಮಿತಿ ರೈತರ ಪ್ರತಿಭಟನೆಗೆ ಬಗ್ಗೆ ಪ್ರತಿಕ್ರಿಯಿಸಿದೆ. ಭಾರತ ಸರ್ಕಾರ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು. ಈ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಕಾಪಾಡಬೇಕು ಅಂತ ಹೇಳಿದೆ. ಅಲ್ಲದೆ ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಬಾರದು.. ರೈತರು ಮತ್ತು ಪತ್ರಕರ್ತರಿಗೆ ಇಂಟರ್ನೆಟ್ ಸೇವೆ ಒದಗಿಸಬೇಕು ಅಂತ ಹೇಳಿದೆ.

ಆದ್ರೆ ಇಲ್ಲಿ ಒಂದು ಅಂಶವನ್ನು ಗಮನಿಸಬೇಕು.. ದೆಹಲಿ ಗಡಿಯಲ್ಲಿ 2 ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದ್ರೂ ಇಂಟರ್​ನೆಟ್​ ಸಂಪರ್ಕ ಕಡಿತಗೊಳಿಸಿರಲಿಲ್ಲ. ಆದ್ರೆ ಜನವರಿ 26ರ ಪ್ರತಿಭಟನೆ ಬಳಿಕವಷ್ಟೇ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply