ನಿನ್ನೆ ಪೊಲೀಸ್ ಕೈ ಕಟ್…ಇವತ್ತು ಖಾಕಿ ಮೇಲೆ ಗುಂಡಿನ ದಾಳಿ..!

masthmagaa.com:

ಪಂಜಾಬ್​​: ಫರೀದ್​ಕೋಟ್​ನಲ್ಲಿ ಕರ್ಫ್ಯೂ ವೇಳೆ ಪೊಲೀಸರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇಲ್ಲಿನ ಚೆಕ್​ಪೋಸ್ಟ್ ಒಂದರಲ್ಲಿ ಪೊಲೀಸರು ಇಬ್ಬರನ್ನು ತಡೆದಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತರು ಪೊಲೀಸರ ಜೊತೆಯೇ ವಾಗ್ವಾದಕ್ಕಿಳಿದು, ಕೈ ಕೈ ಮಿಲಾಯಿಸಿದ್ದಾರೆ. ಪೊಲೀಸರ ಸಮವಸ್ತ್ರ ಹರಿದ ದುಷ್ಕಮಿಗಳು, ರಿವಾಲ್ವರ್​​ನಿಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

ನಿನ್ನೆಯಷ್ಟೇ ಪಟಿಯಾಲದಲ್ಲಿ ನಿಹಾಂಗ್ ಪಂಥದ ಅನುಯಾಯಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದುಷ್ಕರ್ಮಿಗಳು ಎಎಸ್​ಐ ಒಬ್ಬರ ಕೈ ತುಂಡು ಮಾಡಿದ್ದರು.

-masthmagaa.com

Contact Us for Advertisement

Leave a Reply