ಯೋಗಿ ಸರ್ಕಾರ ಮಹತ್ವದ ಹೆಜ್ಜೆ: 27 ಲಕ್ಷ ಕಾರ್ಮಿಕರಿಗೆ 611 ಕೋಟಿ ದುಡ್ಡು..!

masthmagaa.com:

ಉತ್ತರಪ್ರದೇಶ: ವಿಶ್ವದಾದ್ಯಂತ ಕೊರೋನಾ ವೈರಸ್ ಹಾವಳಿ ಮಿತಿ ಮೀರಿದ್ದು, ಭಾರತವನ್ನು ಲಾಕ್​ಡೌನ್ ಮಾಡಲಾಗಿದೆ. ಇದ್ರಿಂದ ದಿನಗೂಲಿ ನೌಕರರಿಗೆ ಹೆಚ್ಚಿನ ತೊಂದರೆಯಾಗಿದ್ದು, ಊಟಕ್ಕೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ಮನ್ರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ 27.5 ಲಕ್ಷ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದೆ. ಹೀಗಾಗಿ ಅವರ ಖಾತೆಗಳಿಗೆ 611 ಕೋಟಿ ರೂಪಾಯಿ ಹಾಕಲು ನಿರ್ಧರಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಮನ್ರೇಗಾ ದಿನಗೂಲಿ ಮೊತ್ತವನ್ನು 182 ರೂಪಾಯಿಯಿಂದ 202 ರೂಪಾಯಿಗೆ ಏರಿಸಿದೆ. ಅದಕ್ಕೆ ಅನುಗುಣವಾಗಿ ಯೋಗಿ ಸರ್ಕಾರ ದಿನಗೂಲಿ ನೌಕರರ ಖಾತೆಗೆ ದುಡ್ಡು ಹಾಕಿದೆ. ಇಷ್ಟೇ ಅಲ್ಲ.. ಈಗಾಗಲೇ 20 ಲಕ್ಷ ದಿನಗೂಲಿ ನೌಕರರಿಗೆ ಯೋಗಿ ಸರ್ಕಾರ ತಲಾ ಒಂದೊಂದು ಸಾವಿರ ರೂಪಾಯಿ ಹಾಕಿದೆ. ಈ ಮೂಲಕ ಲಾಕ್​​​ಡೌನ್​​ ಸಮಯದಲ್ಲಿ ದಿನಗೂಲಿ ನೌಕರರ ಸಹಾಯಕ್ಕೆ ನಿಂತಿದೆ.

-masthmagaa.com

Contact Us for Advertisement

Leave a Reply