ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 581ಕ್ಕೆ ಏರಿಕೆ..!

masthmagaa.com:

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ ದೇಶದಲ್ಲಿ 581 ಮಂದಿಗೆ ಸೋಂಕು ತಗುಲಿದೆ. ಈ ಮಹಾಮಾರಿಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 112 ಪ್ರಕರಣಗಳು ಪತ್ತೆಯಾಗಿದ್ರೆ, ಕೇರಳದಲ್ಲಿ 105 ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಇಡೀ ದೇಶಾದ್ಯಂತ 46 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ವಿಶ್ವದಾದ್ಯಂತ 4,22,989 ಮಂದಿಗೆ ಸೋಂಕು ತಗುಲಿದ್ದು, ಒಟ್ಟಾರೆಯಾಗಿ 18,916 ಮಂದಿ ಸಾವನ್ನಪ್ಪಿದ್ದಾರೆ. ಅದ್ರಲ್ಲೂ ಇಟಲಿಯೊಂದರಲ್ಲೇ 6,820 ಮಂದಿ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply