ಸೆಪ್ಟೆಂಬರ್​​​ನಲ್ಲಿ ಮಾರುಕಟ್ಟೆಗೆ ಕೊರೋನಾ ಲಸಿಕೆ..!1000 ರೂ. ಫಿಕ್ಸ್..!

masthmagaa.com:

ಪುಣೆ: ಭಾರತದಲ್ಲಿ ಕೊರೋನಾ ಲಸಿಕೆ ಯಶಸ್ವಿಯಾದ್ರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಮಾರುಕಟ್ಟೆಗೆ ಬರುತ್ತೆ. 1,000 ರೂಪಾಯಿಗೆ ಇದು ಜನರಿಗೆ ಲಭ್ಯವಾಗಲಿದೆ. ಹೀಗಂತ  ಕೊರೋನಾ ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿರುವ ಪುಣೆಯ ಸೇರಮ್​ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದರ್ ಪೂನಾವಾಲ್ಲಾ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಲಸಿಕೆಯ ಪ್ರಯೋಗದ ರಿಸಲ್ಟ್ ಬರುವ ಮುನ್ನವೇ ನಾವು ಲಸಿಕೆ ಉತ್ಪಾದನೆ ಆರಂಭಿಸುತ್ತೇವೆ. ಅಂದ್ರೆ ಮುಂದಿನ ತಿಂಗಳ ಅಂತ್ಯದಲ್ಲೇ ಲಸಿಕೆ ಉತ್ಪಾದನೆ ಶುರು ಮಾಡುತ್ತೇವೆ. ಯಾಕಂದ್ರೆ ಹೀಗೆ ಮಾಡಿದ್ರೆ ಪ್ರಯೋಗ ಯಶಸ್ವಿಯಾಗುತ್ತಿದ್ದಂತೆ ಲಸಿಕೆಯನ್ನು ಮಾರುಕಟ್ಟೆಗೆ ತರಲು ಸಾಧ್ಯವಾಗುತ್ತೆ. ಇಲ್ಲವಾದಲ್ಲಿ ಪ್ರಯೋಗದ ಬಳಿಕ ಉತ್ಪಾದನೆ ಆರಂಭವಾದ್ರೆ ಪುನಃ ಲಸಿಕೆ ತಡವಾಗುತ್ತೆ ಅಂತ ಹೇಳಿದ್ದಾರೆ.

ಜೊತೆಗೆ ನಮ್ಮ ಕೇಂದ್ರ, ಲಸಿಕೆ ಉತ್ಪಾದನೆಗೆ ಸಿದ್ಧವಾಗಿದೆ. ನಮ್ಮ ಇಡೀ ತಂಡವನ್ನು ಲಸಿಕೆ ಉತ್ಪಾದನೆಗೆ ಬಳಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ನಮ್ಮ ಕೇಂದ್ರ ಕಾರ್ಖಾನೆಯಲ್ಲಿ 500ರಿಂದ 600 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೇವೆ. ಇದಲ್ಲದೇ ಕೇವಲ ಕೋವಿಡ್-19 ಲಸಿಕೆ ತಯಾರಿಸಲು ಮತ್ತೊಂದು ಕಾರ್ಖಾನೆ ಸ್ಥಾಪಿಸುತ್ತೇವೆ ಅಂತಲೂ ಪೂನವಾಲ್ಲಾ ಹೇಳಿದ್ದಾರೆ.

masthmagaa.com:

Contact Us for Advertisement

Leave a Reply