ಲಾಕ್​ಡೌನ್ ಉಲ್ಲಂಘನೆ: ಮದುವೆ ಜೋಡಿ, ಪಾದ್ರಿ ಸೇರಿ 50 ಮಂದಿ ಅರೆಸ್ಟ್​​..!

masthmagaa.com:

ಸೌತ್ ಆಫ್ರಿಕ: ಕೊರೋನಾ ವೈರಸ್ ವಿಶ್ವದಾದ್ಯಂತ ಹಲವು ದೇಶಗಳ ಲಾಕ್​ಡೌನ್​​ಗೆ ಕಾರಣವಾಗಿದೆ. ಅದೇ ರೀತಿ ಸೌತ್ ಆಫ್ರಿಕಾದಲ್ಲೂ ಲಾಕ್​ಡೌನ್ ಜಾರಿಯಾಗಿದ್ದು, ಸದ್ಯ 2ನೇ ವಾರ ನಡೀತಿದೆ. ಆದ್ರೆ ಈ ನಡುವೆ ರಿಚರ್ಡ್ಸ್​ ಬೇ ಎಂಬಲ್ಲಿ ಲಾಕ್​ಡೌನ್ ನಿಯಮಗಳನ್ನು ಉಲ್ಲಂಘಿಸಿ ಮದುವೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 50ರಿಂದ 60 ಮಂದಿ ಭಾಗಿಯಾಗಿದ್ದರು. 48 ವರ್ಷದ ಜಬುಲಾನಿ ಜುಲು ಮತ್ತು 38 ವರ್ಷದ ನೊಮ್ತಂಡಜೊ ಎಂಬ ಜೋಡಿಯ ಮದುವೆ ಇದಾಗಿತ್ತು. ಆದ್ರೆ ಮದುವೆ ಕಾರ್ಯಕ್ರಮದ ವೇಳೆ ಅಲ್ಲಿಗೆ ಬಂದ ಪೊಲೀಸರು, ಮದುವೆ ಜೋಡಿಯ ಜೊತೆಗೆ ಪಾದ್ರಿ ಮತ್ತು 50 ಮಂದಿಯನ್ನು ಅರೆಸ್ಟ್​ ಮಾಡಿ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ತುಂಬಾ ವೈರಲ್ ಆಗಿವೆ.

-masthmagaa.com

Contact Us for Advertisement

Leave a Reply