ದೇಶದಲ್ಲಿ 24 ಗಂಟೆಯಲ್ಲಿ ದಾಖಲೆ ಪ್ರಮಾಣದ ಸೋಂಕು, ಸಾವು..!!

masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 3,900 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 195 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೊರೋನಾ ಹಾವಳಿ ಶುರುವಾದ ಬಳಿಕ ಒಂದೇ ದಿನದಲ್ಲಿ ಈ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದು ಮತ್ತು ಸಾವನ್ನಪ್ಪಿದ್ದು ಇದೇ ಮೊದಲು…

ಈ ಮೂಲಕ ದೇಶದಲ್ಲಿ ಈವರೆಗೆ 46,433 ಮಂದಿಗೆ ಸೋಂಕು ತಗುಲಿದಂತಾಗಿದೆ. ಮೃತರ ಸಂಖ್ಯೆ 1,568ಕ್ಕೆ ಏರಿಕೆಯಾಗಿದೆ. ಇನ್ನು 12,727 ಮಂದಿ ಗುಣಮುಖರಾಗಿದ್ದು, 32,134 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದ ಒಟ್ಟು ಸೋಂಕಿತರಲ್ಲಿ ಶೇ.52ರಷ್ಟು ಸೋಂಕಿತರು ಮಹಾರಾಷ್ಟ್ರ, ಗುಜರಾತ್​, ದೆಹಲಿ ರಾಜ್ಯಗಳಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರೋ ಮಹಾರಾಷ್ಟ್ರದಲ್ಲಿ 14,541 ಮಂದಿಗೆ ಸೋಂಕು ತಗುಲಿದ್ರೆ, 583 ಮಂದಿ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರೋ ಗುಜರಾತ್​​ನಲ್ಲಿ 5,804 ಮಂದಿಗೆ ಸೋಂಕು ತಗುಲಿದ್ರೆ, 319 ಮಂದಿ ಸಾವನ್ನಪ್ಪಿದ್ದಾರೆ. 3ನೇ ಸ್ಥಾನದಲ್ಲಿರೋ ದೆಹಲಿಯಲ್ಲಿ 4,898 ಮಂದಿಗೆ ಸೋಂಕು ತಗುಲಿದ್ದು, 64 ಮಂದಿ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply