ದೇಶದಲ್ಲಿ 107 ಜನರಿಗೆ ಕೊರೋನಾ.. ಪಕ್ಕದ ರಾಜ್ಯಗಳಲ್ಲೇ ಹೆಚ್ಚು..!

masthmagaa.com:

ದೇಶದಲ್ಲಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ ಅನ್ನೋ ಆತಂಕಕಾರಿ ಮಾಹಿತಿಯನ್ನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಈ ಪೈಕಿ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು 31 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ದೇಶದಲ್ಲಿ ಕೊರೋನಾ ಸೋಂಕು ಮೊದಲು ಕಾಣಿಸಿಕೊಂಡ ಕೇರಳದಲ್ಲಿ 22, ಹರಿಯಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 11, ದೆಹಲಿಯಲ್ಲಿ 7 ಹಾಗೂ ಕರ್ನಾಟಕದಲ್ಲಿ ಇದುವರೆಗೆ 6 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಕಲಬುರಗಿಯ ವೃದ್ಧ ಹಾಗೂ ದೆಹಲಿಯಲ್ಲಿ 69 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಮಾರಣಾಂತಿಕ ವೈರಸ್‌ ಅನ್ನು ‘ಅಧಿಸೂಚಿತ ವಿಪತ್ತು’ ಅಂತ ಘೋಷಿಸಿದೆ. ಅಲ್ಲದೆ ಕಾಯಿಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ‘ರಾಜ್ಯ ವಿಪತ್ತು ಪರಿಹಾರ ನಿಧಿ’ಯನ್ನು (ಎಸ್‌ಡಿಆರ್‌ಎಫ್‌) ಬಳಸುವಂತೆ ಸೂಚಿಸಿದೆ. ಜೊತೆಗೆ 2020ರ ಜೂನ್ 30ರವರೆಗೆ ಮಾಸ್ಕ್​ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನ ಅಗತ್ಯ ಸರಕುಗಳೆಂದು ಘೋಷಿಸಿದೆ.

-masthmagaa.com

Contact Us for Advertisement

Leave a Reply