masthmagaa.com:

ರಾಜ್ಯದಲ್ಲಿ ಕೊರೋನಾ ಆರ್ಭಟ ಕಡಿಮೆಯಾಗುವ ಲಕ್ಷಣ ಕಾಣ್ತಿಲ್ಲ. ತಿಂಗಳ ಹಿಂದಷ್ಟೇ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ 10-11ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 4ನೇ ಸ್ಥಾನಕ್ಕೆ ಬಂದಿದೆ. ಇದರ ಅರ್ಥ ರಾಜ್ಯದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಅಂತ. ಅದ್ರಲ್ಲೂ ರಾಜಧಾನಿ ಬೆಂಗಳೂರು ಸೋಂಕು ಸ್ಫೋಟದ ಹೊಸ ಹಾಟ್​ಸ್ಪಾಟ್ ಆಗಿದೆ.

ಇಷ್ಟೇ ಅಲ್ಲ, ರಾಜ್ಯವಾರು ಆ್ಯಕ್ಟಿವ್ ಅಥವಾ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಒಟ್ಟು ಮೃತಪಟ್ಟ ಸೋಂಕಿತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆದ್ರೆ ಗುಣಮುಖರಾದವರಲ್ಲಿ ಕರ್ನಾಟಕ ಟಾಪ್-5 ರಾಜ್ಯಗಳ ಪಟ್ಟಿಯಲ್ಲಿ ಇಲ್ಲ ಅನ್ನೋದು ಗಮನಾರ್ಹ.

ಒಟ್ಟು ಸೋಂಕಿತರು (ಟಾಪ್-5 ರಾಜ್ಯಗಳು):

1. ಮಹಾರಾಷ್ಟ್ರ: 3.37 ಲಕ್ಷ

2. ತಮಿಳುನಾಡು: 1.86 ಲಕ್ಷ

3. ದೆಹಲಿ: 1.26 ಲಕ್ಷ

4. ಕರ್ನಾಟಕ: 75,833

5. ಆಂಧ್ರಪ್ರದೇಶ: 64,713

 

ಸಕ್ರಿಯ ಪ್ರಕರಣಗಳು (ಟಾಪ್-5 ರಾಜ್ಯಗಳು):

1. ಮಹಾರಾಷ್ಟ್ರ: 1.37 ಲಕ್ಷ

2. ತಮಿಳುನಾಡು: 51,000

3. ಕರ್ನಾಟಕ: 47,000

4. ಆಂಧ್ರಪ್ರದೇಶ: 31,000

5. ಉತ್ತರ ಪ್ರದೇಶ: 20,000

 

ಒಟ್ಟು ಮೃತಪಟ್ಟವರು (ಟಾಪ್ -5 ರಾಜ್ಯಗಳು):

1. ಮಹಾರಾಷ್ಟ್ರ: 12,000

2. ದೆಹಲಿ: 3,700

3. ತಮಿಳುನಾಡು: 3,100

4. ಗುಜರಾತ್: 2,200

5. ಕರ್ನಾಟಕ: 1,500

 

ಒಟ್ಟು ಗುಣಮುಖ (ಟಾಪ್ -10 ರಾಜ್ಯಗಳು):

1. ಮಹಾರಾಷ್ಟ್ರ: 1.87 ಲಕ್ಷ

2. ತಮಿಳುನಾಡು: 1.31 ಲಕ್ಷ

3. ದೆಹಲಿ: 1.07 ಲಕ್ಷ

4. ತೆಲಂಗಾಣ: 37,000

5. ಗುಜರಾತ್: 37,000

6. ಉತ್ತರಪ್ರದೇಶ: 33,000

7. ಆಂಧ್ರಪ್ರದೇಶ: 32,000

8. ಪಶ್ಚಿಮ ಬಂಗಾಳ: 29,000

9. ಕರ್ನಾಟಕ: 27,000

10. ರಾಜಸ್ಥಾನ: 23,000

-masthmagaa.com

Contact Us for Advertisement

Leave a Reply