1,52,000 ಜನರಿಗೆ ಅಂಟಿತು ಕೊರೋನಾ.. 141 ದೇಶ ತತ್ತರ..!

masthmagaa.com:

ನಿಯಂತ್ರಣಕ್ಕೆ ಸಿಗದೆ ಕಾಡ್ಗಿಚ್ಚಿನಂತೆ ಒಂದಾದ ಮೇಲೆ ಒಂದು ದೇಶಕ್ಕೆ ಹರಡುತ್ತಿರುವ ಕೊರೋನಾ ಮಹಾಮಾರಿಗೆ 141 ದೇಶಗಳು ನಲುಗಿ ಹೋಗಿವೆ ಅಂತ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಲ್ಲದೆ ಚಿಕಿತ್ಸೆ ಇಲ್ಲದ ಈ ಕಾಯಿಲೆ 1,52,000ಕ್ಕೂ ಹೆಚ್ಚು ಜನರಲ್ಲಿ ದೃಢಪಟ್ಟಿದ್ದು, ಇದುವರೆಗೆ 5,720 ಜನ ಮೃತಪಟ್ಟಿದ್ದಾರೆ ಅಂತ ಹೇಳಿದೆ. ಈ ಪೈಕಿ ಅತಿ ಹೆಚ್ಚು ಜನ ಮೃತಪಟ್ಟಿರೋ ಚೀನಾದಲ್ಲಿ ಸದ್ಯ ಕೊರೋನಾ ಕಾಟ ಕಮ್ಮಿಯಾಗಿದ್ದು, ಹೊಸದಾಗಿ ಪತ್ತೆಯಾಗುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ಚೀನಾ ಹೊರತುಪಡಿಸಿದ್ರೆ ಯುರೋಪ್​ನಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಟಲಿಯಲ್ಲಿ ಕೊರೋನಾ ಸೋಂಕು ದೃಢಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದ್ದು, 1,500ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ಸ್ಪೇನ್, ಫ್ರಾನ್ಸ್, ಜರ್ಮನಿಯಲ್ಲೂ ಕೊರೋನಾ ಹಾವಳಿ ಮಿತಿಮೀರಿದೆ.

ಇರಾನ್​ನಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 12 ಸಾವಿರ ಗಡಿ ದಾಟಿದ್ದು, 600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ದಕ್ಷಿಣ ಕೊರಿಯಾ, ಜಪಾನ್, ಅಮೆರಿಕದಲ್ಲೂ ಕೊರೋನಾ ಸೋಂಕಿತರು ಹಾಗೂ ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

-masthmagaa.com

Contact Us for Advertisement

Leave a Reply