ಲಾಕ್​ಡೌನ್ ಎಫೆಕ್ಟ್​​​: 400 ಕಿ.ಮೀ ಸೈಕಲ್ ತುಳಿದು ಗ್ರಾಮ ಸೇರಿದ ವಲಸಿಗ..!

masthmagaa.com:

ಬಿಹಾರ: ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಆದ್ರೆ ಇದ್ರಿಂದ ದಿನದ ಸಂಪಾದನೆ ನಂಬಿಕೊಂಡು ಬದುಕುತ್ತಿದ್ದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅದ್ರಲ್ಲೂ ವಲಸೆ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದೇ ಈ ನಗರಗಳಲ್ಲಿ ಬದುಕೋದು ಕಷ್ಟವಾಗ್ತಿದೆ. ಹೀಗಾಗಿ ಕಾರ್ಮಿಕರು ನಡೆದುಕೊಂಡು, ಸೈಕಲ್, ರಿಕ್ಷಾ ಮೂಲಕ ತಮ್ಮ ಗ್ರಾಮಗಳಿಗೆ ಸೇರಿಕೊಳ್ಳಲು ಯತ್ನಿಸ್ತಿದ್ದಾರೆ.

ಇದೇ ರೀತಿಯ ಘಟನೆ ಬಿಹಾರದ ಗೋಪಾಲ್​​ಗಂಜ್​ನಲ್ಲಿ ನಡೆದಿದೆ. ಇಲ್ಲಿನ ರಾಜ್​ಕುಮಾರ್ ಎಂಬಾತ ಜಾರ್ಖಂಡ್​​ನ ರಾಜಧಾನಿ ರಾಂಚಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದರು. ಆದ್ರೆ ಲಾಕ್​ಡೌನ್​ನಿಂದಾಗಿ ಕೆಲಸವೇ ಇಲ್ಲದಂತಾಯ್ತು. ಹೊತ್ತಿನ ಊಟಕ್ಕೂ ಕಷ್ಟವಾದಾಗ ರಾಜ್​ಕುಮಾರ್, ಸೈಕಲ್  ಮೂಲಕ ತಮ್ಮ ಗ್ರಾಮಕ್ಕೆ ತೆರಳಲು ನಿರ್ಧರಿಸಿದ್ರು.

ಈ ರೀತಿ 400 ಕಿಲೋಮೀಟರ್ ದೂರದ ಗ್ರಾಮಕ್ಕೆ ಹೊರಟ ರಾಜ್​ಕುಮಾರ್​​ಗೆ ಮಾರ್ಗ ಮಧ್ಯೆ ಹಲವು ಕಷ್ಟಗಳು ಎದುರಾದವು. ಆದ್ರೆ ಮಾರ್ಗದಲ್ಲಿ ಸಿಕ್ಕ ಎಲ್ಲಾ ಪೊಲೀಸರು ರಾಜ್​ಕುಮಾರ್​​ಗೆ ಊಟ, ತಿಂಡಿ ನೀಡಿ ತಮ್ಮ ಕೈಲಾದ ಸಹಾಯ ಮಾಡಿದರು. ಕೊನೆಗೂ 3 ದಿನಗಳ ಪ್ರಯಾಣದ ಬಳಿಕ ರಾಜ್​ಕುಮಾರ್ ತಮ್ಮ ಗ್ರಾಮವನ್ನು ತಲುಪಿದ್ದಾರೆ.

-masthmagaa.com

Contact Us for Advertisement

Leave a Reply