ಸಚಿವೆ ನಿರ್ಮಲಾ ‘ಮೆಸೆಂಜರ್ ಆಫ್ ಗಾಡ್’ ಎಂದಿದ್ಯಾಕೆ ಚಿದಂಬರಂ..?

masthmagaa.com:

ದೆಹಲಿ:  ಕೊರೋನಾ ಆಕ್ಟ್​ ಆಫ್ ಗಾಡ್ ಅಂದ್ರೆ ‘ದೇವರ ಕೃತ್ಯ’ ಎಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೆಂಡಕಾರಿದ್ದಾರೆ. ನಿರ್ಮಲಾ ಸೀತಾರಾಮನ್​​ರನ್ನು ಮೆಸೆಂಜರ್ ಆಫ್ ಗಾಡ್​​​​ ಎಂದು ಕರೆದಿರುವ ಚಿದಂಬರಂ, ಕೊರೋನಾವನ್ನು ಆಕ್ಟ್​ ಆಫ್ ಗಾಡ್ ಎಂದು ಕರೆಯೋದಾದ್ರೆ, 2017-18, 2018-19, 2019-20ರಲ್ಲಿ ಸೋಂಕು ಬರುವ ಮುನ್ನ ಇದ್ದ ಆರ್ಥಿಕ ಅವ್ಯವಸ್ಥೆಯನ್ನು ಹೇಗೆ ವಿವರಿಸಬೇಕು..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಜಿಎಸ್​​ಟಿ ನಷ್ಟ ಭರ್ತಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿರುವ ಎರಡೂ ಆಯ್ಕೆಗಳು ಅಸಂಬದ್ಧವಾಗಿದ್ದು, ಒಪ್ಪಿಕೊಳ್ಳಲು ಸಾಧ್ಯವಿಲ್ಲ.. ಕೇಂದ್ರ ಸರ್ಕಾರ ಹಣಕಾಸಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ತಿದ್ದು, ಇದು ಸಂಪೂರ್ಣ ದ್ರೋಹ ಮತ್ತು ಕಾನೂನಿನ ನೇರ ಉಲ್ಲಂಘನೆಯಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಮೊನ್ನೆಯಷ್ಟೇ ಜಿಎಸ್​ಟಿ ಸಮಿತಿ ಸಭೆ ಬಳಿಕ ಮಾತನಾಡಿದ್ದ ನಿರ್ಮಲಾ ಸೀತಾರಾಮನ್, ಕೊರೋನಾ ಒಂದು ರೀತಿಯಲ್ಲಿ ಆಕ್ಟ್​ ಆಫ್ ಗಾಡ್​​ ಅಂದ್ರೆ ‘ದೇವರ ಕೃತ್ಯ’.. ಹೀಗಾಗಿ ರಾಜ್ಯ ಸರ್ಕಾರಗಳು ಸಾಲ ಪಡೆಯೋ ಮೂಲಕ ಜಿಎಸ್​ಟಿಯಿಂದಾದ ನಷ್ಟವನ್ನು ಭರಿಸಿಕೊಳ್ಳಬೇಕು ಎಂದು ಎರಡು ಆಯ್ಕೆಗಳನ್ನು ಮುಂದಿಟ್ಟಿದ್ದರು.

-masthmagaa.com

Contact Us for Advertisement

Leave a Reply