ಈ ಆಸ್ಪತ್ರೆ ಈಗ ಕೊರೋನಾ ಹಾಟ್​ಸ್ಪಾಟ್​..! 28 ಮಂದಿಗೆ ಸೋಂಕು..!

masthmagaa.com:

ದೆಹಲಿ ಕ್ಯಾನ್ಸರ್ ಆಸ್ಪತ್ರೆ ಈಗ ಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗಿದೆ. ಇಲ್ಲಿ ಈವರೆಗೆ 28 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೊದಲಿಗೆ ವೈದ್ಯರೊಬ್ಬರಿಗೆ ಇಂಗ್ಲೆಂಡ್​ನಿಂದ ಬಂದಿದ್ದ ಅವರ ಸಹೋದರನಿಂದ ಸೋಂಕು ತಗುಲಿತ್ತು. ಈ ವೈದ್ಯರ ಮೂಲಕ ಉಳಿದವರಿಗೂ ಸೋಂಕು ತಗುಲಿದೆ.

ಇಂದು ಮತ್ತೆ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಓರ್ವ ಕ್ಯಾನ್ಸರ್ ರೋಗಿ, ಅಟೆಂಡೆಂಟ್ ಮತ್ತು ಸೆಕ್ಯೂರಿಟಿ ಗಾರ್ಡ್​ ಒಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಇದಕ್ಕೂ ಮೊದಲೇ ಮೂವರು ವೈದ್ಯರು ಮತ್ತು ಮೂವರು ಕ್ಯಾನ್ಸರ್ ರೋಗಿಗಳು ಮತ್ತು ಹಲವು ನರ್ಸ್​​ಗಳಿಗೆ ಸೋಂಕು ತಗುಲಿತ್ತು. ಹೀಗಾಗಿ ಏಪ್ರಿಲ್ 1ರಂದು ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply