ಭಾರತದಲ್ಲಿ 2 ಬಾರಿ ರೂಪಾಂತರಗೊಂಡಿರೋ ವೈರಾಣು ಪತ್ತೆ!

masthmagaa.com:

ದೇಶದಲ್ಲಿ ಎರಡು ಬಾರಿ ರೂಪಾಂತರಗೊಂಡಿರೋ (double mutant Covid-19 variant) ಕೊರೋನಾ ವೈರಾಣು ಕಾಣಿಸಿಕೊಂಡಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಅಂದ್ರೆ ಒಂದೇ ವೈರಾಣು ಎರಡು ಸಲ ರೂಪ ಬದಲಿಸಿರುತ್ತೆ. ಎರಡು ಬಾರಿ ರೂಪಾಂತರಗೊಂಡ ವೈರಾಣುವಿನಲ್ಲಿ ಏನಾದ್ರೂ ಸ್ಪೈಕ್​ ಪ್ರೋಟೀನ್​ನಲ್ಲಿ ಜಾಸ್ತಿ ಬದಲಾವಣೆ ಆದ್ರೆ ಅದು ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಂಡು ಹೋಗುವ ಅಪಾಯ ಹೆಚ್ಚಿರುತ್ತೆ. ಇದರಿಂದ ಅದು ಹರಡುವ ವೇಗ ಕೂಡ ಹೆಚ್ಚಾಗುತ್ತೆ ಅಂತ ತಜ್ಞರು ಹೇಳಿದ್ದಾರೆ.

ಆದ್ರೆ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾಗೋಕೆ ಡಬಲ್​ ಮ್ಯೂಟಂಟ್ ವೇರಿಯಂಟ್ ಅಥವಾ ಬೇರೆ ರೀತಿಯ ರೂಪಾಂತರಿ ವೈರಾಣು ಕಾರಣ ಅನ್ನೋದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲ. ಅದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದೇವೆ ಅಂತ ಸರ್ಕಾರ ಹೇಳಿದೆ. ಡಬಲ್ ಮ್ಯೂಟೆಂಟ್ ವೈರಾಣು ಹೊರತುಪಡಿಸಿ ದೇಶದಲ್ಲಿ ಇದುವರೆಗೆ ಸಾಕಷ್ಟು ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಅದರಲ್ಲಿ 771 ‘ವೇರಿಯಂಟ್ಸ್ ಆಫ್ ಕನ್ಸರ್ನ್ಸ್’ (VOCs) ಅಂತೆ. ಅಂದ್ರೆ ಚಿಂತೆಗೆ ಕಾರಣವಾಗಿರೋ ವೈರಾಣು ಅನ್ಬೋದು.
-masthmagaa.com:

Contact Us for Advertisement

Leave a Reply