ತಮಿಳುನಾಡಿನಲ್ಲಿ ಲಾಕ್​ಡೌನ್​ ಉಲ್ಲಂಘಿಸಿದ 78,707 ಮಂದಿ ಅರೆಸ್ಟ್​​​..!

masthmagaa.com:

ತಮಿಳುನಾಡು: ಕೊರೋನಾ ವೈರಸ್ ತಡೆಯಲು ಭಾರತವನ್ನು ಲಾಕ್​ಡೌನ್ ಮಾಡಲಾಗಿದೆ. ಆದ್ರೆ ಕೆಲವರು ಈ ಲಾಕ್​ಡೌನ್ ನಿಯಮಗಳನ್ನು ಪಾಲಿಸುತ್ತಿಲ್ಲ. ಸುಖಾಸುಮ್ಮನೆ ರಸ್ತೆಗೆ ಇಳಿದು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಆದ್ರೆ ತಮಿಳುನಾಡಿನಲ್ಲಿ ಲಾಕ್​ಡೌನ್ ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಈವರೆಗೆ ತಮಿಳುನಾಡಿನಲ್ಲಿ ಲಾಕ್​ಡೌನ್ ಉಲ್ಲಂಘಿಸಿದ ಆರೋಪದಲ್ಲಿ 78,837 ಮಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಇವರಲ್ಲಿ 78,707 ಮಂದಿಯನ್ನು ಅರೆಸ್ಟ್​ ಕೂಡ ಮಾಡಲಾಗಿದೆ. ಅಲ್ಲದೆ ಪೊಲೀಸರು ಈವರೆಗೆ  59,868 ವಾಹನಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೆ 71,204 ಎಫ್​ಐಆರ್ ಕೂಡ ದಾಖಲಿಸಿದ್ದಾರೆ.

ತಮಿಳುನಾಡಿನಲ್ಲಿ ಈವರೆಗೆ 485 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply