ಕೊರೋನಾ ವೈರಸ್ ಬಗ್ಗೆ ಸಾನಿಯಾ ಮಿರ್ಜಾ ಜಾಗೃತಿ..!

ಚೀನಾದಲ್ಲಿ ಮರಣ ಮೃದಂಗ ಬಾರಿಸಿದ ಕೊರೋನಾ ವೈರಸ್ ಈಗ ಭಾರತದ ಮೇಲೂ ವಕ್ರದೃಷ್ಟಿ ಬೀರುತ್ತಿದೆ. ಹೀಗಾಗಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಸಾನಿಯಾ ಮಿರ್ಜಾ, ಕೊರೋನಾ ವೈರಸ್ ಲಕ್ಷಣಗಳಾದ ಶೀತ, ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಆದ್ರೆ ಕೂಡಲೇ ವೈದ್ಯರ ಬಳಿ ತೆರಳಿ. ಇದಕ್ಕಾಗಿ ಒಂದು ಹೆಲ್ಪ್​​ಲೈನ್ ನಂಬರ್ ಕೂಡ ಇದೆ. 104804 ನಂಬರ್​​​ಗೆ ಕರೆ ಮಾಡಿ ನೀವು ಸಹಾಯ ಪಡೆಯಬಹುದು ಅಂತ ಹೇಳಿದ್ದಾರೆ. ಆಗಾಗ ಕೈ ತೊಳೆಯೋ ಅಭ್ಯಾಸ ಬೆಳೆಸಿಕೊಳ್ಳಿ, ಕೊರೋನಾ ವೈರಸ್ ಲಕ್ಷಣ ಕಂಡು ಬಂದರೆ ಮಾಸ್ಕ್​ ಧರಿಸಿ, ಆಸ್ಪತ್ರೆಗೆ ದಾಖಲಾಗಿ. ಇದ್ರಿಂದ ಬೇರೆಯವರಿಗೆ ಕೊರೋನಾ ವೈರಸ್ ಹರಡೋದನ್ನ ತಡೆಯಬಹುದು ಅಂತ ಹೇಳಿದ್ದಾರೆ.

Contact Us for Advertisement

Leave a Reply