ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಪ್ಲಾನ್ ಏನು..?

masthmagaa.com:

ದೆಹಲಿ: ವಿದೇಶಗಳಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ವಾಪಸ್ ಕರೆತರಲು ಭಾರತ ಮುಂದಾಗಿದೆ. ಈ ವಾರದಲ್ಲಿ 13 ದೇಶಗಳಿಂದ 14,800 ಮಂದಿ ಭಾರತೀಯರನ್ನು ಕರೆತರಲು ಭಾರತ ಪ್ಲಾನ್ ಮಾಡಿದೆ. ಇನ್ನುಳಿದಂತೆ ಪಶ್ಚಿಮ ಏಷ್ಯಾ ಮತ್ತು ಮಾಲ್ಡೀವ್ಸ್​​​​​ನಿಂದ ಭಾರತೀಯರನ್ನು ಕರೆತರಲು ಈಗಾಗಲೇ ನೌಕಾಪಡೆಯ ಮೂರು ನೌಕೆಗಳು ತೆರಳಿವೆ.

ಅಮೆರಿಕ, ಫಿಲಿಪೈನ್ಸ್, ಸಿಂಗಾಪುರ್, ಬಾಂಗ್ಲಾದೇಶ, ಯುಎಇ, ಯುಕೆ, ಸೌದಿ ಅರೇಬಿಯಾ, ಕತಾರ್, ಸಿಂಗಾಪುರ್, ಫಿಲಿಪೈನ್ಸ್, ಓಮನ್, ಬಹ್ರೇನ್ ಮತ್ತು ಕುವೈತ್ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಮಾನಗಳು ಭಾರತಕ್ಕೆ ಕರೆತರಲಿವೆ..

ಮೊದಲ ದಿನ 10 ವಿಮಾನಗಳು 2,300 ಮಂದಿ ಭಾರತೀಯರನ್ನು ಹೊತ್ತು ಭಾರತಕ್ಕೆ ಹಾರಲಿವೆ. 2ನೇ ದಿನ 2,050 ಮಂದಿ ಭಾರತೀಯರು ಚೆನ್ನೈ, ಕೊಚ್ಚಿ, ಮುಂಬೈ ಅಹ್ಮದಾಬಾದ್, ಬೆಂಗಳೂರು ಮತ್ತು ದೆಹಲಿಗೆ ಆಗಮಿಸಲಿದ್ದಾರೆ. 3ನೇ ದಿನವೂ ಕೂಡ ಇದೇ ಪ್ರಮಾಣದಲ್ಲಿ ಮಧ್ಯ ಪೂರ್ವ, ಯೂರೋಪ್​​ ಮತ್ತು ಆಗ್ನೇಯ ಏಷ್ಯಾದ 13 ದೇಶಗಳಿಂದ ಭಾರತೀಯರು ಮುಂಬೈ, ಕೊಚ್ಚಿ, ಲಕ್ನೋ, ದೆಹಲಿಗೆ ಬರಲಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯತೆ ಇರೋದ್ರಿಂದ ಪ್ರತಿ ವಿಮಾನದಲ್ಲಿ 200ರಿಂದ 300 ಜನರನ್ನು ಕರೆತರಲು ಪ್ಲಾನ್ ಮಾಡಲಾಗಿದೆ.

ಆದ್ರೆ  ಪ್ರಯಾಣಿಕರಲ್ಲಿ ಯಾವುದೇ ರೀತಿಯ ಜ್ವರ, ಕೆಮ್ಮು, ಡಯಾಬಿಟಿಸ್ ಸಮಸ್ಯೆ ಮತ್ತು ಶ್ವಾಸಕೋಶ ಸಂಬಂಧಿತ ಕಾಯಿಲೆ ಇರಬಾರದು.. ಆರೋಗ್ಯವಂತರಾಗಿರುವವರನ್ನು ಮಾತ್ರವೇ ಭಾರತಕ್ಕೆ ಕರೆತರಲಾಗುತ್ತೆ ಅಂತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

-masthmagaa.com

 

Contact Us for Advertisement

Leave a Reply