ಕೊರೋನಾ ಹೋರಾಟದ ಬಗ್ಗೆ ಕೇರಳ ಪೊಲೀಸರ ವಿಡಿಯೋ ಸಾಂಗ್​..!

masthmagaa.com:

ಕೇರಳ ಪೊಲೀಸರು ಕೊರೋನಾ ವಿರುದ್ಧ ತಮ್ಮ ಹೋರಾಟದ ಕುರಿತು ವಿಡಿಯೋ ಸಾಂಗ್ ಒಂದನ್ನು ಮಾಡಿದ್ದಾರೆ. ಈ ಹಾಡಿನಲ್ಲಿ ಕೇರಳದ ಡಿಜಿಪಿ ಲೋಕ್​ನಾಥ್ ಬೆಹ್ರಾ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಾವು ಕೊರೋನಾ ವಿರುದ್ಧದ ಹೋರಾಟದಲ್ಲಿ ಮಂಡಿಯೂರುವುದಿಲ್ಲ.. ಸೋಲುವುದಿಲ್ಲ ಎಂದು ಸಂದೇಶ ನೀಡಿದ್ದಾರೆ. ಜೊತೆಗೆ ಈ ಹಾಡನ್ನು ಕೇರಳ ಪೊಲೀಸ್​​ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

ಕೇರಳ ಪೊಲೀಸರೇ ನಿರ್ದೇಶಿಸಿ, ಹಾಡಿರುವ ಈ ವಿಡಿಯೋ ಸಾಂಗ್​​​ಗೆ ಖ್ಯಾತ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅದ್ಭುತವಾಗಿದೆ..ಪೊಲೀಸ್ ಸಮವಸ್ತ್ರದಲ್ಲಿ ಹಾಡುವ ಪ್ರತಿಭೆ ಕೂಡ ಇರೋದಕ್ಕೆ ನನಗೆ ಖುಷಿಯಾಗಿದೆ. ಸೂಕ್ಷ್ಮ ಮತ್ತು ಚಿಂತನಶೀಲ ಆಲೋಚನೆಯೊಂದಿಗೆ ಬಂದ ಕೇರಳ ಪೊಲೀಸ್ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ. ನಿಮಗೆ ನನ್ನ ನಮಸ್ಕಾರ ಅಂತ ಬರೆದುಕೊಂಡಿದ್ದಾರೆ.

-masthmagaa.com

https://www.facebook.com/keralapolice/videos/1142631719403962/

 

 

Contact Us for Advertisement

Leave a Reply