ಭಾರತದಲ್ಲಿ ಕೊರೋನಾಗೆ 1,000 ಜನ ಬಲಿ..! 31,332 ಮಂದಿಗೆ ಸೋಂಕು

masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದ್ದು, ಮೃತರ ಸಂಖ್ಯೆ 1,000 ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 73 ಜನ ಸಾವನ್ನಪ್ಪಿದ್ದು, 1896 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಒಂದು ದಿನದಲ್ಲಿ ಇಷ್ಟು ಜನ ಸಾವನ್ನಪ್ಪಿರೋದು ಮತ್ತು ಸೋಂಕಿಗೆ ತುತ್ತಾಗಿರೋದು ಇದೇ ಮೊದಲು..

ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 31,332ಕ್ಕೆ ಏರಿಕೆಯಾಗಿದ್ದು, 1007 ಮಂದಿ ಈ ಮಹಾಮಾರಿಗೆಬಲಿಯಾಗಿದ್ದಾರೆ. ಇನ್ನುಳಿದಂತೆ 7,696 ಮಂದಿ ಗುಣಮುಖರಾಗಿದ್ದಾರೆ. 22,629 ಮಂದಿ ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ 9,318 ಮಂದಿ ಸೋಂಕಿತರು ಪತ್ತೆಯಾಗಿದ್ದು, ಮೊದಲ ಸ್ಥಾನದಲ್ಲಿದೆ. ಇಲ್ಲಿ ಈವರೆಗೆ 400 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 2ನೇ ಸ್ಥಾನದಲ್ಲಿರೋ ಗುಜರಾತ್​ನಲ್ಲಿ 3,744 ಮಂದಿಗೆ ಸೋಂಕು ತಗುಲಿದ್ದು, 181 ಮಂದಿ ಮೃತಪಟ್ಟಿದ್ದಾರೆ. ಇನ್ನು ದೆಹಲಿ 3,314 ಮಂದಿ ಸೋಂಕಿತರೊಂದಿಗೆ 3ನೇ ಸ್ಥಾನದಲ್ಲಿದ್ದು, 54 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕರ್ನಾಟಕದಲ್ಲಿ ಈವರೆಗೆ 523 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply