ರಸ್ತೆ ಮಧ್ಯದಲ್ಲೇ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ..!

masthmagaa.com:

ರಾಜಸ್ಥಾನ: ವಾಹನ ಕೈಕೊಟ್ಟ ಕಾರಣ ಗರ್ಭಿಣಿಯೊಬ್ಬರು ರಸ್ತೆ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ರಾಜಸ್ಥಾನದ ಜೋಧ್​​ಪುರದ ಅಕಲಿಯಾ ಚೌರಾಹಾದಲ್ಲಿ ಈ ಘಟನೆ ವರದಿಯಾಗಿದೆ.

ಬಾಡ್​ಮೇರ್​ನ ನಾಗಾಣಾ ಗ್ರಾಮದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ವಾಹನವೊಂದರಲ್ಲಿ ಜೋಧ್​ಪುರ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಅಕಲಿಯಾ ಚೌರಾಹದಲ್ಲಿ ಅವರ ವಾಹನ ಕೈಕೊಟ್ಟಿದೆ. ತುಂಬಾ ಹೊತ್ತಿನವರೆಗೆ ವಾಹನ ಅಲ್ಲೇ ನಿಂತಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಬೇರೆ ವಾಹನಗಳು ಸಿಗಲೇ ಇಲ್ಲ. ಹೀಗಾಗಿ ಮಹಿಳೆ ಆ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಈ ವೇಳೆ ವಿಷಯ ತಿಳಿದ ಪೊಲೀಸರು ಮತ್ತು ಯೋಧರು ವಾಹನದ ಸುತ್ತಲೂ ಟೆಂಟ್ ನಿರ್ಮಿಸಿ, ಸಹಾಯ ಮಾಡಿದ್ದಾರೆ. ನಂತರ ಆಂಬ್ಯುಲೆನ್ಸ್ ಕರೆಸಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

-masthmagaa.com

Contact Us for Advertisement

Leave a Reply