ಈ ಆಸ್ಪತ್ರೆಯಲ್ಲಿ ನಾವು ಗುಣಮುಖರಾಗಲ್ಲ: ಕೊರೋನಾಪೀಡಿತರ ಅಳಲು

masthmagaa.com:

ಉತ್ತರ ಪ್ರದೇಶದ ಎಟವಾಹ್​​​​​​ನಲ್ಲಿರೋ ಕೋವಿಡ್​​-19 ಆಸ್ಪತ್ರೆಯೊಂದರ ಭಯಾನಕ ಚಿತ್ರಣ ಈಗ ಹೊರಬಂದಿದೆ. ಸೈಫೈನಲ್ಲಿರೋ ಈ  ಆಸ್ಪತ್ರೆಯ ಕಾರಿಡಾರ್ ಮತ್ತು ಶೌಚಾಲಯದ ಬಳಿ ಕಸದ ರಾಶಿಯೇ ಬಿದ್ದಿದೆ. ಇದನ್ನು ಕೊರೋನಾ ರೋಗಿಯೊಬ್ಬರು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ಕೊರೋನಾ ರೋಗಿಗಳನ್ನು ಪ್ರತ್ಯೇಕವಾಗಿ ಇಡೋದು ಅನಿವಾರ್ಯ.. ಆದ್ರೆ ಇಲ್ಲಿ ಸಾಮಾಜಿಕ ಅಂತರವನ್ನೇ ಕಾಯ್ದುಕೊಳ್ಳುತ್ತಿಲ್ಲ. ಹೀಗಾದ್ರೆ ರೋಗಿಗಳು ಗುಣಮುಖರಾಗೋದು ಹೇಗೆ ಅಂತ ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಆಗ್ರಾದ ಆಸ್ಪತ್ರೆಯಿಂದ ಎಟವಾಹ್​​ನ ಸೈಫೈನ ಆಸ್ಪತ್ರೆಗೆ 69 ಮಂದಿ ಕೊರೋನಾ ಸೋಂಕುಪೀಡಿತರನ್ನು ಕಳುಹಿಸಲಾಗಿತ್ತು. ಈ ವೇಳೆಯೂ ಆಸ್ಪತ್ರೆ ಸಿಬ್ಬಂದಿ ಕೊರೋನಾ ಪೀಡಿತರನ್ನು ಗೇಟ್ ಹೊರಗಡೆಯೇ ಕಾಯುವಂತೆ ಮಾಡಿದ್ದರು.

ಈ ಬಗ್ಗೆ ವಿಡಿಯೋದಲ್ಲಿ ಅಳಲು ತೋಡಿಕೊಂಡಿರೋ ರೋಗಿಗಳು, ನಾವು ಈ ಆಸ್ಪತ್ರೆಯಲ್ಲಿ ಗುಣಮುಖರಾಗಲು ಸಾಧ್ಯವಿಲ್ಲ.. ನಮ್ಮನ್ನು ಇಲ್ಲಿಗೆ ಸಾಯಲೆಂದೇ ಕರೆದುಕೊಂಡು ಬಂದಿರಬೇಕು.. ಇಲ್ಲಿ 40 ರೋಗಿಗಳಿದ್ದು, ಅಷ್ಟೂ ಜನಕ್ಕೆ ಕೇವಲ 2 ಶೌಚಾಲಯಗಳಿವೆ.. ಒಂದು ಮಹಿಳೆಯರಿಗೆ..ಒಂದು ಪುರುಷರಿಗೆ.. ಅದು ಕೂಡ ಕಸದಿಂದಲೇ ತುಂಬಿಹೋಗಿದ್ದು, ಸ್ವಚ್ಛತೆಯೇ ಇಲ್ಲ.. ಅಂತ ಹೇಳಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಆಸ್ಪತ್ರೆಗೆ ಸರ್ಕಾರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ದಿನಕ್ಕೆರಡು ಬಾರಿ ಆಸ್ಪತ್ರೆ ಸ್ವಚ್ಛಗೊಳಿಸುವಂತೆ, ಕೊರೋನಾ ಪೀಡಿತರಿಗೆ ಸರಿಯಾದ ರೀತಿಯಲ್ಲಿ ಆಹಾರ ನೀಡುವಂತೆ ಆಸ್ಪತ್ರೆ  ಸಿಬ್ಬಂದಿಗೆ ಸೂಚಿಸಿದ್ದಾರೆ.

-masthmagaa.com

 

Contact Us for Advertisement

Leave a Reply