ಗಾಳಿಯ ಮೂಲಕವೂ ಸೋಂಕು ಹರಡುತ್ತೆ.. ಹೊಸ ಸಂಶೋಧನೆ..!

masthmagaa.com:

ಕೊರೋನಾ ವೈರಸ್​ ಸಾಮಾನ್ಯ ಉಸಿರಾಟ ಹಾಗೂ ಮಾತನಾಡುವ ಮೂಲಕ ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ ಅಂತ ಅಮೆರಿಕದ ಉನ್ನತ ವಿಜ್ಞಾನಿಗಳು ಹೇಳಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದಲ್ಲಿ ಸೋಂಕಿತರು ಮಾತ್ರವಲ್ಲದೆ ಪ್ರತಿಯೊಬ್ಬರೂ ಮಾಸ್ಕ್​ ಧರಿಸುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ.

ಅಮೆರಿಕದ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಹೆಲ್ತ್​ನಲ್ಲಿ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥರಾಗಿರೋ ಡಾ. ಆಂಥೋನಿ ಫೌಚಿ, ‘ಕೆಮ್ಮು ಮತ್ತು ಸೀನುವಿಕೆಯಿಂದ ಮಾತ್ರವಲ್ಲದೆ ಜನರು ಮಾತನಾಡುವಾಗಲೂ ವೈರಸ್ ಹರಡಬಹುದು ಅಂತ ಇತ್ತೀಚಿನ ಕೆಲ ಸಂಶೋಧನೆಗಳಲ್ಲಿ ಕಂಡುಬಂದಿದೆ’ ಎಂದಿದ್ದಾರೆ.

ಏಪ್ರಿಲ್ 1ರಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ (ಎನ್​ಎಎಸ್​) ಕೊರೋನಾ ವೈರಸ್ ಕುರಿತ ಸಂಶೋಧನೆಯೊಂದರ ವರದಿಯನ್ನ ಶ್ವೇತಭವನಕ್ಕೆ ಕಳುಹಿಸಿದ ನಂತರ ಡಾ. ಫೌಚಿ ಈ ಹೇಳಿಕೆಯನ್ನು ಕೊಟ್ಟಿರೋದು ಸಾಕಷ್ಟು ಮಹತ್ವ ಪಡೆದಿದೆ. ಸಂಶೋಧನೆ ಇನ್ನೂ ಪೂರ್ಣಗೊಳ್ಳದಿದ್ದರೂ, ಲಭ್ಯವಿರುವ ಅಧ್ಯಯನಗಳ ಪ್ರಕಾರ ಸಾಮಾನ್ಯ ಉಸಿರಾಟದಿಂದ ಗಾಳಿಯ ಮೂಲಕ ಸೋಂಕು ಹರಡಬಹುದು ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದುವರೆಗೆ ಸೀನುವಾಗ ಅಥವಾ ಕೆಮ್ಮಿದಾಗ ಹೊರಬರುವ ಡ್ರಾಪ್ಲೆಟ್ಸ್​ಗಳು ಕೊರೋನಾ ಸೋಂಕು ಹರಡುವ ಪ್ರಾಥಮಿಕ ಮಾರ್ಗ ಅಂತ ಅಮೆರಿಕದ ಆರೋಗ್ಯ ಸಂಸ್ಥೆಗಳು ಹೇಳಿದ್ದವು. ಹೀಗಾಗಿ ಸೋಂಕು ತಗುಲಿದವರು ಮಾತ್ರ ಮಾಸ್ಕ್​ಗಳನ್ನ ಧರಿಸುವಂತೆ ಸೂಚಿಸಲಾಗಿತ್ತು. ಆದ್ರೀಗ ಗಾಳಿಯ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ಹೇಳಿರೋದು ಆತಂಕ ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply