masthmagaa.com:

ಇತ್ತೀಚಿನ ದಿನಗಳಲ್ಲಿ ಕೊರೋನಾ ಈ ಭೂಮಿ ಕಂಡ ಅತಿದೊಡ್ಡ ಮಹಾಮಾರಿ ಅಂತ ನಾವೆಲ್ಲಾ ಚರ್ಚೆ ಮಾಡ್ತಿದೀವಿ. ಆದ್ರೆ ಈ ವಿಚಾರದಲ್ಲಿ ನಾವು ವಿಶ್ವ ಆರೋಗ್ಯ ಸಂಸ್ಥೆ ಮಾತನ್ನ ಕೇಳಲೇಬೇಕು. ಕೊರೋನಾ ಅತ್ಯಂತ ಗಂಭೀರ ಪ್ರಮಾಣದ ಪರಿಣಾಮಗಳನ್ನ ಈ ಜಗತ್ತಿನ ಮೇಲೆ ಬೀರಿದೆ ನಿಜ. ವೇಗವಾಗಿ ಹರಡ್ತಾ ಇದೆ, ಹಲವರ ಪ್ರಾಣವನ್ನೂ ತೆಗೆದುಕೊಂಡಿದೆ. ಆದ್ರೆ ಇದು ಎಲ್ಲಕ್ಕಿಂತ ದೊಡ್ಡ ಮಹಾಮಾರಿ ರೋಗ ಅಲ್ಲ. ಈ ಕಾಯಿಲೆಯಲ್ಲಿ ಪ್ರಾಣ ಹೋಗುವ ಪ್ರಮಾಣ ಕಮ್ಮಿ ಇದೆ. ಆದ್ರೆ ಮುಂದೆ ಎಮರ್ಜ್ ಆಗಬಹುದಾದ ಕೆಲ ಕಾಯಿಲೆಗಳಲ್ಲಿ ಸಾವಿನ ಪ್ರಮಾಣ ಇದಕ್ಕಿಂತ ಹಲವು ಪಟ್ಟು ಜಾಸ್ತಿ ಇರಬದು. ಇದಕ್ಕಿಂತಲೂ ಆ ಕಾಯಿಲೆಗಳು ಭಯಾನಕವಾಗಿರಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸೀಸ್ ಮುಖ್ಯಸ್ಥ ಮೈಖೇಲ್ ರಯಾನ್ ಹೇಳಿದ್ದಾರೆ. ನಾವು ಈಗಲೇ ಈ ಕಾಯಿಲೆಯಿಂದ ಪಾಠ ಕಲೀಬೇಕು ಹಾಗೂ ಮುಂದೆ ಬರಬಹುದಾದ ಇದಕ್ಕಿಂತಲೂ ಭಯಾನಕವಾದ ಕಾಯಿಲೆಗಳಿಗೆ ಎಲ್ಲಾ ದೇಶಗಳು ತಯಾರಿ ಮಾಡಿಕೊಳ್ಳಬೇಕು. ಕಾಯಿಲೆ ಬಂದಾದಮೇಲೆ ತಯಾರಿ ನಡೆಸುವಷ್ಟರಲ್ಲಿ ಹಲವರ ಪ್ರಾಣ ಹೋಗಿರುತ್ತೆ. ಹೀಗಾಗಿ ಜಗತ್ತಿನ ದೇಶಗಳು ಆರೋಗ್ಯ ಸಂಬಂಧಿ ಕ್ಷೇತ್ರಗಳ ಮೇಲೆ ಹೆಚ್ಚಿನ ಖರ್ಚು ಮಾಡಬೇಕು. ಕಾಯಿಲೆಗಳು ಹೇಗೆ ಹುಟ್ಟುತ್ತವೆ, ಅದನ್ನ ತಡೆಯೋದು ಹೇಗೆ ಎಂಬ ಸಂಶೋಧನೆಗೆ ಹೆಚ್ಚಿನ ಗಮನ ಕೊಡಬೇಕು. ಈ ಭೂಮಿಯ ಪರಿಸರವನ್ನ ಉಳಿಸೋದ್ರ ಕಡೆ ಗಮನ ಕೊಡಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply