ಸಾವಿನ ವಿಚಾರದಲ್ಲಿ ಚೀನಾ ಕಳ್ಳಾಟಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು..?

masthmagaa.com:

ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ನಂತರ ಜಗತ್ತಿನ ಎಲ್ಲಾ ದೇಶಗಳು ಸಾವಿನ ಸಂಖ್ಯೆಯನ್ನು ಪರಿಷ್ಕರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಚೀನಾದಲ್ಲಿ ಈ ಸೋಂಕು ಹುಟ್ಟಿಕೊಂಡಿದ್ದ ವುಹಾನ್​ನಲ್ಲಿ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ. ಈ ಮೂಲಕ ಶೇ.50ರಷ್ಟು ಸಾವಿನ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 1,290ರಿಂದ 3,869ಕ್ಕೆ ಸಾವಿನ ಸಂಖ್ಯೆಯನ್ನು ಏರಿಸಿ, ಚೀನಾ ಹೊಸ ಲೆಕ್ಕ ನೀಡಿದೆ. ಅಲ್ಲದೆ ಕೊರೋನಾಗೆ ಬಲಿಯಾದವರ ಸಂಖ್ಯೆಯನ್ನು ಚೀನಾ ಮುಚ್ಚಿಡುತ್ತಿದೆ ಎಂದು ಇಡೀ ವಿಶ್ವ ಆರೋಪಿಸುತ್ತಿರುವ ಹೊತ್ತಲ್ಲೇ ಚೀನಾದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​-19ನ ತಾಂತ್ರಿಕ ಮುಖ್ಯಸ್ಥೆ ಮರಿಯಾ ವ್ಯಾನ್ ಕೆರ್ಖೋವ್, ಕಳೆದ ಡಿಸೆಂಬರ್​ನಲ್ಲಿ ಶುರುವಾದ ಈ ವೈರಸ್​​ನಿಂದ ಚೀನಾದ ವುಹಾನ್ ಕಂಗೆಟ್ಟು ಹೋಗಿತ್ತು. ಹೀಗಾಗಿ ಸಾವು ಮತ್ತು ಸೋಂಕಿನ ಬಗ್ಗೆ ಸರಿಯಾದ ದಾಖಲೆ ಇಡಲು ಸಾಧ್ಯವಾಗದೇ ಪರದಾಡುತ್ತಿದೆ ಅಂತ ಹೇಳಿದ್ರು.

ಕೊರೋನಾ ಹಾವಳಿ ಮಿತಿ ಮೀರಿದ್ದು, ಇಂತಹ ಸಂದರ್ಭದಲ್ಲಿ ಸಾವು ಮತ್ತು ಸೋಂಕಿಗೆ ತುತ್ತಾದವರನ್ನು ಪತ್ತೆಹಚ್ಚೋದು ತುಂಬಾ ದೊಡ್ಡ ಸವಾಲಾಗಿದೆ. ಈ ಕಾಯಿಲೆ ನಿಯಂತ್ರಣಕ್ಕೆ ಬಂದ ಬಳಿಕ ಪ್ರತಿಯೊಂದು ರಾಷ್ಟ್ರವು ಸಾವು ಮತ್ತು ಸೋಂಕಿನ ಸಂಖ್ಯೆಯನ್ನು ಪರಿಷ್ಕರಿಸಬೇಕು ಅಂತ ಹೇಳಿದ್ರು.

ಇದೇ ವೇಳೆ ಮಾತನಾಡಿದ, ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ನಿರ್ದೇಶಕ ಮೈಕಲ್ ರ್ಯಾನ್, ಎಲ್ಲಾ ದೇಶಗಳು ಈ ಸಮಸ್ಯೆ ಎದುರಿಸಲಿವೆ ಎಂದು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply